ಪತಿ ಹಿಂಸೆ: ಮೂರು ಮಕ್ಕಳ ಜತೆ ತಾಯಿ ಆತ್ಮಹತ್ಯೆ
ಶಿರಹಟ್ಟಿ: ಕುಡಿದು ಬಂದು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಪತಿಯ ಹಿಂಸೆ ತಾಳದೆ ಮಹಿಳೆಯೊಬ್ಬಳು ತನ್ನ 3 ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ತಾಲೂಕಿನ ಪರಸಾಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮಂಗಳವಾರ ಸಾಯಂಕಾಲ ಮಕ್ಕಳು ಶಾಲೆ ಬಿಟ್ಟು ಮನೆಗೆ ಬಂದ ನಂತರ ನಿವೇದಿತಾ ಶ್ರೀಕಾಂತ ಈಳಗೇರ (28) ತನ್ನ ಮಕ್ಕಳಾದ ಕಾವ್ಯ (7), ಪೂರ್ಣಿಮಾ (6), ಸೃಜನ (1)ಳನ್ನು ಕರೆದುಕೊಂಡು ಹೋಗಿ ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗಂಡ ಹಿಂಸೆ ನೀಡುವುದಲ್ಲದೇ ಇನ್ನೊಂದು ಮದುವೆ ಆಗುವುದಾಗಿ ಪೀಡಿಸುತ್ತಿದ್ದ ಎನ್ನಲಾಗಿದ್ದು, ತೀವ್ರ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ನಾಲ್ವರ ಶವಗಳು ಪತ್ತೆ ಹಚ್ಚಲಾಗಿದೆ.