ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಾಮೂಹಿಕ ಮದುವೆ ಸಮಾಜಕ್ಕೆ ಸಂಜೀವಿನಿ

Vishwanath S
Updated On : 5 Dec 2013, 11:06 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಡಿ. 4
ಬೆಲೆ ಏರಿಕೆಯ ಇಂದಿನ ದಿನಮಾನಗಳಲ್ಲಿ ಒಂದು ಮದುವೆಗೆ ಕನಿಷ್ಠ ರು. 2ರಿಂದ 3 ಲಕ್ಷ ಖರ್ಚು ಮಾಡಬೇಕಿದ್ದು, ವಿವಿಧ ಸಂಘ-ಸಂಸ್ಥೆಗಳು, ಮಠ-ಮಾನ್ಯಗಳು ಆಯೋಜಿಸುತ್ತಿರುವ ಸಾಮೂಹಿಕ ಮದುವೆಗಳು ಸಮಾಜಕ್ಕೆ ಸಂಜೀವಿನಿಯಾಗಿವೆ ಎಂದು ನರಗುಂದ ತಾಲೂಕಿನ ಬೈರನಹಟ್ಟಿಯ ದೊರೆಸ್ವಾಮಿ ವಿರಕ್ತ ಮಠದ ಜಗದ್ಗುರು ಶಾಂತಲಿಂಗ ಮಹಾಸ್ವಾಮಿಗಳು ಹೇಳಿದರು.
ಮುಂಡರಗಿ ಪಟ್ಟಣದಲ್ಲಿ ವೀರಭದ್ರೇಶ್ವರ ಸೇವಾ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ 10 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಮಾತನಾಡಿ, ಮದುವೆ ಎನ್ನುವುದು ಕೇವಲ ಮೂರು ಅಕ್ಷರ ಮಾತ್ರವಲ್ಲ. ಇದು ಎರಡು ಕುಟುಂಬಗಳ ಜನ್ಮಜನ್ಮಾಂತರದ ಸಂಬಂಧವಾಗಿರುತ್ತದೆ. 12ನೇ ಶತಮಾನದ ಬಸವಾದಿ ಶಿವಶರಣರು ಜಾರಿಗೆ ತಂದಿರುವ ಈ ಸಾಮೂಹಿಕ ಮದುವೆ ಕಾರ್ಯಕ್ರಮ ನಮ್ಮ ಸಂಸ್ಕೃತಿಯ ಪೋಷಣೆಯಾಗಿದೆ ಎಂದರು. ಶಿರಹಟ್ಟಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿದರು. ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಹಾಗೂ ವಿವಿಧ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ರುದ್ರಾರಾಧ್ಯ ಶಾಸ್ತ್ರಿಗಳ ಚತುರ್ಥಪುಷ್ಟ ನೂತನ ಗ್ರಹಪ್ರವೇಶ ಗ್ರಂಥವನ್ನು ಪೂಜ್ಯ ಶಾಂತಲಿಂಗ ಶ್ರೀಗಳು ಬಿಡುಗಡೆಗೊಳಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಅಂದಪ್ಪ ಗೋಡಿ ಅಧ್ಯಕ್ಷತೆ ವಹಿಸಿದ್ದರು.
ಕರಬಸಪ್ಪ ಹಂಚಿನಾಳ, ಹೇಮಂತಗೌಡ ಪಾಟೀಲ, ಬಸವಂತಪ್ಪ ಮುದ್ದಿ, ರಾಘವೇಂದ್ರ ಕುರಿಯವರ, ವೀರೇಶ ಸಜ್ಜನರ, ಮುದಿಯಪ್ಪ ಕುಂಬಾರ, ರಾಮು ಕಲಾಲ, ಎಸ್.ಡಿ. ಮಕಾಂದಾರ, ಬಸವರಾಜ ಬಿಸನಳ್ಳಿ, ಆರ್.ಎಸ್. ಪಾಟೀಲ, ಶಿವಯೋಗಿ ಕೊಪ್ಪಳ, ಗ್ಯಾನಪ್ಪ ಶೀರಿ, ಮಂಜುನಾಥ ಗೋಡಿ, ಭಾಗ್ಯಲಕ್ಷ್ಮಿ ಬಿಳಿಮಗ್ಗದ, ದತ್ತಣ್ಣ ಅಳವಂಡಿ, ಈಶಣ್ಣ ಬೆಟಗೇರಿ, ವೀರೇಶ ಗೋಡಿ ಪಾಲ್ಗೊಂಡಿದ್ದರು.
ಕೊಟ್ರೇಶ ಅಂಗಡಿ ಸ್ವಾಗತಿಸಿದರು. ಎಸ್.ಜಿ. ಕಡ್ಡಿ, ಕಾಶೀನಾಥ ಬಿಳಿಮಗ್ಗದ ಕಾರ್ಯಕ್ರಮ ನಿರೂಪಿಸಿದರು. ಶರಣಪ್ಪ ಕುಬಸದ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement