ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಬ್ಬಗಳ ಆಚರಣೆಯಿಂದ ನೆಮ್ಮದಿ: ಪಿಳ್ಳಿ

Vishwanath S
Updated On : 5 Dec 2013, 11:07 am

ಗದಗ: ಆಧ್ಯಾತ್ಮದ ಅರಿವು ಸಾಮರಸ್ಯಕ್ಕೆ ದಾರಿ ದೀಪವಾಗಿದ್ದು, ಭಾವೈಕ್ಯ ಸಮಾಜ ನಿರ್ಮಾಣಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಅವಶ್ಯಕವೆಂದು ನಗರಸಭೆ ಸದಸ್ಯ ಸದಾನಂದ ಪಿಳ್ಳಿ ಹೇಳಿದರು.
ಅವರು ಸೋಮವಾರ ಬೆಟಗೇರಿಯ ಟನಲ್ ಪೇಟದ ಮಂಜುನಾಥ ಸ್ವಾಮಿ ದೇವಸ್ಥಾನದ 30ನೇ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾರ್ವತ್ರಿಕ ಹಬ್ಬಗಳ ಸಾಮೂಹಿಕ ಆಚರಣೆ ಮೂಲಕ ಹಿಂದೂ ಸಂಪ್ರದಾಯಗಳನ್ನು ಮುನ್ನಡೆಸುವುದು ಇಂದಿನ ದಿನಮಾನದ ಅವಶ್ಯಕತೆಯಾಗಿದ್ದು, ಮಾನವನಲ್ಲಿ ತುಂಬಿರುವ ಅಂಧಕಾರ, ಅಜ್ಞಾನ ಹೋಗಲಾಡಿಸುವ ಅಧ್ಯಾತ್ಮ ಚಿಂತನೆಗಳು, ಮಠ ಮಾನ್ಯಗಳಿಂದ ದೇವಸ್ಥಾನ ಆಡಳಿತ ಮಂಡಳಿಗಳಿಂದ ನಿರಂತರವಾಗಿ ಜರುಗಬೇಕಿದೆ ಎಂದರು. ಶಿವಣ್ಣ ಮುಳಗುಂದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯೆ ಚಿನ್ನವ್ವ ಮುಳಗುಂದ ಹಾಗೂ ಮಂಜುನಾಥ ಮುಳಗುಂದ ಇವರನ್ನು ಸನ್ಮಾನಿಸಲಾಯಿತು. ನಗರಸಭೆ ಸದಸ್ಯ ನಾಗರಾಜ ಗಣಾಚಾರಿ, ಮಂಜುನಾಥ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ನಗರಾಧ್ಯಕ್ಷೆ ನಾಗರತ್ನಾ ಮುಳಗುಂದ, ಕಮಾಲಾ ಹಾದಿಮನಿ, ನಾಗಲಿಂಗ ಐಲಿ ಶ್ರೀನಿವಾಸ ಕರಿ, ರಾಘವೇಂದ್ರ ಯಳವತ್ತಿ, ಶ್ರೀಕಾಂತಪ್ಪ ಮುಳಗುಂದ, ಫಕ್ಕೀರಪ್ಪ ಹೆಬಸೂರ, ಅಮರೇಶ ಚ್ಯಾಗಿ, ಅನಿಲ ಗಡ್ಡಿ, ವಿಜಯಕುಮಾರ ಕಬಾಡಿ, ಬಿ.ವಿ. ರೋಣದ ಉಪಸ್ಥಿತರಿದ್ದರು. ಲಕ್ಷ್ಮಣ ಮುಳಗುಂದ ಸ್ವಾಗತಿಸಿದರು. ವಾಸುದೇವ ಹುಣಸೀಮರದ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement