ಅಂಗವಿಕಲತೆ ಶಾಪವಲ್ಲ: ಅನ್ನಪೂರ್ಣಾ ವರವಿ
ಗದಗ: ಅಂಗವಿಕಲತೆ ಶಾಪವಲ್ಲ, ಅಂಗವಿಕಲತೆಯನ್ನು ಸಮಾಜ ಸಮಾನತೆಯಿಂದ ಕಾಣುವ ಮೂಲಕ ವಿಕಲಚೇತನರಿಗೆ ಆದ್ಯತೆಯಲ್ಲಿ ಅವಕಾಶ ಕಲ್ಪಿಸಬೇಕೆಂದು ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ ಹೇಳಿದರು.
ಅವರು ಮಂಗಳವಾರ ನಗರದ ಉಮಾದೇವಿ ಗೌಡರ ಅವರ ನಿವಾಸದಲ್ಲಿ ಇನ್ನರ್‌ವ್ಹೀಲ್ ಕ್ಲಬ್‌ದಿಂದ ಆಚರಿಸಲಾದ ವಿಶ್ವ ಅಂಗವಿಕಲ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿಕಲಚೇತನರ ಮನಸ್ಸು ಚೇತನಗೊಳ್ಳುವ ರೀತಿಯಲ್ಲಿ ಅವರಲ್ಲಿ ಭವಿಷ್ಯದ ಬಗ್ಗೆ ಆಶಾಭಾವನೆ ಮೂಡಿಸುವ ಹಾಗೇ ಸ್ಫೂರ್ತಿದಾಯಕದ ಪ್ರೇರಣೆ ನೀಡಬೇಕು ಎಂದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರೇಮಾ ಮೇಟಿ ಮಾತನಾಡಿದರು. ಉಮಾ ಗೌಡರ ಹಾಗೂ ಹನಮಂತ ಕೊಣ್ಣೂರ, ರಾಜಶ್ರೀ ದೇಸಾಯಿ, ಶುಭಾಂಗಿ ಜೋಷಿ, ಕಾವೇರಿ ಗೌಡರ, ಹನುಮಂತ ಕೊಣ್ಣೂರ, ಉಮಾದೇವಿ ಗೌಡರ ಪಾಲ್ಗೊಂಡಿದ್ದರು. ಶಾಂತಾ ಮುಂದಿನಮನಿ ಸ್ವಾಗತಿಸಿದರು. ಸುಮಾ ಪಾಟೀಲ ಪರಿಚಯಿಸಿದರು. ಕವಿತಾ ದಂಡಿನ ನಿರೂಪಿಸಿದರು. ಕ್ಲಬ್‌ನ ಕಾರ್ಯದರ್ಶಿ ಸುಲೋಚನ ಐಹೋಳಿ ವಂದಿಸಿದರು.