ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಶಾಲಾ ಸಾಹಿತ್ಯ ಸಿಂಚನ ಕಾರ್ಯಕ್ರಮ

Lingaraj Badiger
Updated On : 6 Dec 2013, 12:30 pm

ಗದಗ: ಗದಗ ತಾಲೂಕು ಕಸಾಪ ನವೆಂಬರ್ ತಿಂಗಳಾದ್ಯಂತ ನುಡಿಹಬ್ಬದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈಗ ಶಾಲಾ ಮಕ್ಕಳಿಗೆ ಕನ್ನಡ ಸಾಹಿತ್ಯದ ಬಗೆಗೆ ಆಸಕ್ತಿ, ಅಭಿಮಾನ, ಅಧ್ಯಯನ ಶೀಲತೆಯನ್ನು ಬೆಳೆಸಬೇಕೆನ್ನುವ ದೃಷ್ಟಿಯಿಂದ ಶಾಲಾ ಸಾಹಿತ್ಯ ಸಿಂಚನ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಡಿ. 6ರ ಮಧ್ಯಾಹ್ನ 3.30ಕ್ಕೆ ನಗರದ ವಿದ್ಯಾದಾನ ಸಮಿತಿ ಬಾಲಕರ ಪ್ರೌಢಶಾಲೆಯಲ್ಲಿ ಶಾಲೆಯ 5 ರಿಂದ 10ನೇ ವರ್ಗದ ವಿದ್ಯಾರ್ಥಿಗಳಿಗಾಗಿ ಥಟ್ ಅಂತ ಹೇಳಿ ಎನ್ನುವ ಕನ್ನಡ ಭಾಷೆಯ ಗಾದೆಮಾತು ಒಗಟು ಹಾಗೂ ನುಡಿಗಟ್ಟುಗಳ ಬಗೆಗೆ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ವಿದ್ಯಾದಾನ ಸಮಿತಿಯ ಅಧ್ಯಕ್ಷ ಡಿ.ಬಿ. ಹುಯಿಲಗೋಳ ಉದ್ಘಾಟಿಸುವರು. ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ, ಹಾಗೂ ಗದಗ ತಾಲೂಕು ಕಸಾಪ ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ ಆಗಮಿಸುವರು. ಎನ್.ಎಸ್. ಬಟ್ಟೂರ ಅಧ್ಯಕ್ಷತೆ ವಹಿಸುವರು. ಕಸಾಪದ ಪದಾಧಿಕಾರಿಗಳು, ಆಜೀವ ಸದಸ್ಯರು, ಸಾಹಿತ್ಯಾಸಕ್ತರು ಆಗಮಿಸುವಂತೆ ಕಾರ್ಯಕ್ರಮದ ಸಂಚಾಲಕ ದತ್ತಪ್ರಸನ್ನ ಪಾಟೀಲ, ಕಸಾಪದ ಗೌರವ ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ, ಕೋಶಾಧ್ಯಕ್ಷ ಬಿ.ಜಿ. ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗದು ಬಹುಮಾನ ಯೋಜನೆ: ಸೂಚನೆ
ಗದಗ: ಕರ್ನಾಟಕವನ್ನು ಅಧಿಕೃತವಾಗಿ ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಪ್ರತಿನಿಧಿಸಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳಿಗೆ ನಗದು ಬಹುಮಾನವನ್ನು ನೀಡುವ ಯೋಜನೆಯ ಮಾರ್ಗಸೂಚಿಗಳಲ್ಲಿರುವ ನಿಬಂಧನೆಗಳ ಮೇರೆಗೆ ಜಾರಿಗೆ ತರಲಾಗಿದೆ ಹಾಗೂ ಅಂಗೀಕೃತ ಕ್ರೀಡೆಗಳಲ್ಲಿ ಚಿನ್ನದ ಪದಕಕ್ಕೆ ರು. 1 ಲಕ್ಷ, ಬೆಳ್ಳಿ ಪದಕಕ್ಕೆ ರು. 50 ಸಾವಿರ ಮತ್ತು ಕಂಚಿನ ಪದಕಕ್ಕೆ ರು. 25 ಸಾವಿರ ನೀಡಲಾಗುವುದು. 2012ರಲ್ಲಿ ಕರ್ನಾಟಕವನ್ನು ಅಧಿಕೃತವಾಗಿ ಪ್ರತಿನಿಧಿಸಿ, ಪದಕ ಪಡೆದ ಅರ್ಹ ಕ್ರೀಡಾಪಟುಗಳು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ವಿವಿಧ ರಾಜ್ಯ ಕ್ರೀಡಾ ಸಂಸ್ಥೆಗಳ ಮುಖಾಂತರ ಕಾರ್ಯಾಲಯಕ್ಕೆ ಡಿಸೆಂಬರ್ 31ರೊಳಗೆ ಕಳುಹಿಸಿಕೊಡಬೇಕೆಂದು ವಿನಂತಿಸಲಾಗಿದೆ. ಅರ್ಹ ಕ್ರೀಡಾಪಟುಗಳು ಈ ಯೋಜನೆಯ ಲಾಭವನ್ನು ಪಡೆಯಬೇಕೆಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ನಾಳೆ ಸಾಹಿತ್ಯ ಸಂಜೆ
ಗದಗ:  ಜಿಲ್ಲಾ ಕಸಾಪ ವತಿಯಿಂದ ತಾಲೂಕು ಪಂಚಾಯಿತಿ ಆವರಣದಲ್ಲಿ ಡಿ. 7ರ ಸಂಜೆ 6ಕ್ಕೆ ಶನಿವಾರ ಸಾಹಿತ್ಯ ಸಂಜೆ ಮಾಲಿಕೆ 49 ಕಾರ್ಯಕ್ರಮ ಜರುಗಲಿದೆ. ಲೋಯಲಾ ಹೈಸ್ಕೂಲಿನ ನಿವೃತ್ತ ಶಿಕ್ಷಕ, ಕವಿ, ಜೆ.ಪಿ. ಕಟ್ಟಿಮನಿ ಕನ್ನಡ ನಾಡು ನುಡಿಗೆ ಶಿಕ್ಷಕರ ಕೊಡುಗೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಬಸವರಾಜ ಸಂಶಿ ಅವರು ಸ್ವರಚಿತ ಕವನವನ್ನು ವಾಚನ ಮಾಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement