ನ್ಯುಮೋನಿಯಾ: ನಿಲ್ಲದ ಕುರಿಮರಿಗಳ ಸಾವು
ಗದಗ: ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ ನ್ಯುಮೋನಿಯಾ ಕಾಯಿಲೆಯಿಂದ ಸಾವನ್ನಪ್ಪುತ್ತಿರುವ ಕುರಿಮರಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗುರುವಾರವೂ ವಿವಿಧ ಕುರಿಗಾರರಿಗೆ ಸೇರಿದ 20ಕ್ಕೂ ಹೆಚ್ಚು ಕುರಿಮರಿ ಸಾವನ್ನಪ್ಪಿವೆ. ಕಳೆದ ಮೂರು ದಿನಗಳಿಂದ ನ್ಯುಮೋನಿಯಾಕ್ಕೆ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಕುರಿಮರಿಗಳು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ದ್ವಿಗುಣಗೊಳ್ಳುತ್ತಿರುವುದು ಕುರಿಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಪಶುಪಾಲನಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಾವನ್ನಪ್ಪಿರುವ ಕುರಿಮರಿಗಳನ್ನು ಪರೀಕ್ಷೆಗೊಳಪಡಿಸಿದ್ದಾರೆ. ಗ್ರಾಮದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕುರಿಮರಿಗಳಿದ್ದು, ಎಲ್ಲರೂ ಆತಂಕ ಪಡುವಂತಾಗಿದೆ.