ರೋಗ ಮುಕ್ತರಾಗಲು ಯೋಗ ಅವಶ್ಯ
ಮುಳಗುಂದ: ರೋಗ ಮುಕ್ತರಾಗಲು ಪ್ರತಿನಿತ್ಯ ಯೋಗ ಪ್ರಾಣಾಯಾಮದ ಅವಶ್ಯಕತೆ ಇದೆ ಎಂದು ಎಪಿಎಂಸಿ ಸದಸ್ಯ ಎಸ್.ಎಂ. ನೀಲಗುಂದ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ವಿದ್ಯಾನಗರ ಬಾಲಲೀಲಾ ಮಹಾಂತ ಶಿವಯೋಗಿ ಯುವಕ ಸಂಘ ಹಾಗೂ ಪತಂಜಲಿ ಯೋಗ ಸಮಿತಿ ಗದಗ ಆಶ್ರಯದಲ್ಲಿ ಜರುಗಿದ ಯೋಗ ಶಿಬಿರ ಮುಕ್ತಾಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗದಗ ಜಿಲ್ಲಾ ಭಾರತ ಸ್ವಾಭಿಮಾನ ಟ್ರಸ್ಟ್ ಅಧ್ಯಕ್ಷ ರುದ್ರಣ ಗುಳಗುಳಿ, 6 ದಿನಗಳ ಕಾಲ ನಗರದ ಜನರಿಗೆ ಯೋಗ ಕಲಿಸಿದ ಯೋಗ ಶಿಕ್ಷಕ ಪ್ರಕಾಶ ಮದ್ದಿನ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಪಪಂ ಸದಸ್ಯ ಸಿ.ಬಿ. ಬಡ್ನಿ ಮಾತನಾಡಿದರು. ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಬಿ.ಎಸ್. ಸಂಗಪ್ಪಶೆಟ್ಟರ್, ಪಪಂ ಸದಸ್ಯ ಮಹೇಶ ಕೋರಿ, ಶಿವವನಪ್ಪ ಹಾರೊಗೇರಿ, ಎನ್.ಪಿ. ಲಮಾಣಿ, ಎಂ.ಬಿ. ಸುಣಗಾರ, ಶಶಿಕಲಾ ವಡಕಣ್ಣವರ, ಪ್ರಭು ಬಳಿಗಾರ, ನಾಗರಾಜ ಪವಾರ, ಜಿ.ಎ. ಬಡಿಗಣ್ಣವರ, ಬಿ.ಬಿ. ಕುಬಸದ, ಬಸವರಾಜ ಹಾರೋಗೇರಿ ಇದ್ದರು. ಶಿವಾನಂದ ಹುಣಸಿಮರದ ನಿರೂಪಿಸಿ, ವಂದಿಸಿದರು.