ವಿಕಲಚೇತನರನ್ನು ಮುಖ್ಯವಾಹಿನಿಗೆ ತನ್ನಿ: ಸುನೀಲ
ನರೇಗಲ್ಲ: ವಿಕಲಚೇತನರು ಎಲ್ಲರಂತೆಯೇ ಸಬಲರು. ಅವರಿಗೆ ಅನುಕಂಪ ಬೇಡ ಬದಲಿಗೆ ಅವರಿಗೆ ದೊರಕುವ ಸೌಲಭ್ಯವನ್ನು ಸರಿಯಾದ ಮಟ್ಟದಲ್ಲಿ ತಲುಪಿಸುವ ಕಾರ್ಯವನ್ನು ಮಾಡಿದಾಗಲೇ ವಿಕಲಚೇತನರ ದಿನಾಚರಣೆಗೆ ಒಂದು ಅರ್ಥ ಬರುತ್ತದೆ ಎಂದು ಪಪಂ ಸದಸ್ಯ ಸುನೀಲ ಬಸವಡ್ಡೇರ ಹೇಳಿದರು.
ಅವರು ಸ್ಥಳೀಯ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಕಿವುಡ ಮಕ್ಕಳ ವಸತಿಯುತ ಪ್ರಾಥಮಿಕ ಮತ್ತು ಪ್ರೌಢಶಾಲೆ ಸಹಯೋಗದಲ್ಲಿ ಮಂಗಳವಾರ ಜರುಗಿದ ವಿಶ್ವ ವಿಕಲಚೇತನರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಪ್ರಶಸ್ತಿ ವಿಜೇತ ಡಿ.ಜಿ. ಕುಲಕರ್ಣಿ, ಜಿ.ಪಿ. ಕುಲಕರ್ಣಿ, ಎಸ್.ಎಂ. ಪಟ್ಟಣಶೆಟ್ಟಿ, ಸಾಲಿಮಠ ಪ್ರಾಸ್ತಾವಿಕ ಮಾತನಾಡಿದರು. ಶಾಲೆ ಮುಖ್ಯಾಧ್ಯಾಪಕ ಬಸಪ್ಪ ಸಂಗಳದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಶಸ್ತಿ ವಿಜೇತ ಲಿಂಗರಾಜ ತಳಬಾಳ, ಎ.ಕೆ. ಕಡೆತೋಟದ, ಎ.ಸಿ. ಮರಡಿಮಠ, ಎಸ್.ವಿ. ಪಾಟೀಲ, ಎಸ್.ಎ. ಅರಮನಿ, ಎಂ.ವಿ. ಹರ್ಲಾಪೂರ, ಡಿ. ಲಕ್ಷ್ಮಣ, ಆರ್.ಕೆ.ನಂದಿಕೋಲ, ಸುವರ್ಣ ಮುಂದಿನಮನಿ ಇದ್ದರು. ಬ್ರಹ್ಮಾನಂದ ಗಾಣಿಗೇರ ನಿರೂಪಿಸಿದರು. ಆರ್.ಕೆ. ಬಾಗವಾನ ವಂದಿಸಿದರು.