ಸಂಘಟನೆಗಳ ಕಾರ್ಯ ಶ್ಲಾಘನೀಯ
ಮುಂಡರಗಿ: ನಂಜುಂಡಪ್ಪನವರ ವರದಿಯ ಪ್ರಕಾರ ಮುಂಡರಗಿ ಹಿಂದುಳಿದ ತಾಲೂಕು. ಈ ತಾಲೂಕಿನಲ್ಲಿ ಸಾವಿರಾರು ಬಡ ಕುಟುಂಬಗಳಿವೆ. ವಿವೇಕ ಜಾಗೃತ ಬಳಗ, ಎಂ.ಎಂ. ಜ್ಯೋಶಿ ನೇತ್ರ ಚಿಕಿತ್ಸಾಲಯ ಸೇರಿದಂತೆ ತಾಲೂಕಿನ ವಿವಿಧ ಸಂಘಟನೆಗಳು ಸೇರಿಕೊಂಡು 18 ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಏರ್ಪಡಿಸುವ ಮೂಲಕ ಸಾವಿರಾರು ಅಂಧರಿಗೆ ಬೆಳಕು ನೀಡುತ್ತಿರುವ ಈ ಕಾರ್ಯಶ್ಲಾಘನೀಯ ಎಂದು ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಹೇಳಿದರು.
ಅವರು ಗುರುವಾರ ಮುಂಡರಗಿ ಪಟ್ಟಣದಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥ ಗದಗ, ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ, ಆಸ್ಪತ್ರೆಯಲ್ಲಿ ಸ್ವಾಮಿ ವಿವೇಕಾನಂದ ಸಾರ್ಧಶತಿ ಸಮಾರೋಪ ಸಮಾರೋಹ ಸಮಿತಿ, ವಿವೇಕ ಜಾಗೃತ ಬಳಗ, ಜಿಲ್ಲಾ ಆಯುಷ್ ಇಲಾಖೆ, ಸುಜಲಾನ್‌ಎನರ್ಜಿ ಲಿಮಿಟೆಡ್ ಕಪ್ಪತ್ತಗುಡ್ಡ ಸೈಟ್, ತಾಲೂಕು ಔಷಧ ವ್ಯಾಪಾರಸ್ಥರ ಸಂಘ, ಪಂಚವಟಿ ಪ್ರತಿಷ್ಟಾನ, ತ್ಯಾಗವೀರ ಶಿರಸಂಗಿ ಲಿಂಗರಾಜ ಸೇವಾ ಸಂಸ್ಥೆ, ಕನ್ನಡಕ್ರಾಂತಿ ಸೇನೆ, ಸರ್ಕಾರಿ ಆಯುರ್ವೇದ್ ಆಸ್ಪತ್ರೆ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸುಜಲಾನ್ ಕಂಪನಿ ಡಿ.ಬಿ. ಪ್ರಹ್ಲಾದ್ ಮಾತನಾಡಿದರು. ನಾಡೋಜ, ಡಾ.ಅನ್ನದಾನೀಶ್ವರ ಮಹಾಸ್ವಾಮಿ ಸಾನಿಧ್ಯ ವಹಿಸಿ ಮಾತನಾಡಿದರು. ನೀಲಕಂಠಪ್ಪ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ಡಾ.ರಾಜು ಪೂಜಾರ, ಈಶ್ವರಪ್ಪ ಉಪ್ಪಿನಬೆಟಗೇರಿ, ದೇವಪ್ಪ ಇಟಗಿ, ಮಂಜುನಾಥ ಮುಧೋಳ ಇದ್ದರು. ಮಂಜುನಾಥ ಇಟಗಿ ಸ್ವಾಗತಿಸಿ, ಡಾ.ಪಿ.ಬಿ.ಹಿರೇಗೌಡ್ರ ನಿರೂಪಿಸಿ, ಪ್ರಾಸ್ಥಾವಿಕವಾಗಿ ಮಾತನಾಡಿದರು. ಡಾ.ಡಿ.ಎ.ದೇಸಾಯಿ ವಂದಿಸಿದರು.