ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಂಗವಿಕಲ ಪದ ಬಳಕೆ ಬೇಡ: ಬುರಡಿ

Vishwanath S
Updated On : 7 Dec 2013, 10:54 am

ಶಿರಹಟ್ಟಿ: ದೈಹಿಕ ನ್ಯೂನತೆ ಇರುವ ಮಕ್ಕಳನ್ನು ಶಾಲೆಯಲ್ಲಿ ಅಂಗವಿಕಲರೆನ್ನದೇ ವಿಶೇಷ ಅಗತ್ಯತೆಯ ಮಕ್ಕಳು ಎಂಬ ಪದ ಉಪಯೋಗಿಸಿ ಅವರಲ್ಲಿನ ಪ್ರತಿಭೆ ಗುರುತಿಸಿ ಮುಕ್ತವಾದ ಅವಕಾಶ ಕಲ್ಪಿಸಿದರೆ ಅವರೂ ಸಾಮಾನ್ಯ ಮಕ್ಕಳಿಗಿಂತ ಹೆಚ್ಚಿನ ಸಾಧನೆ ಮಾಡಬಲ್ಲರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಕಿವಿಮಾತು ಹೇಳಿದರು.
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಪಟ್ಟಣದ ಎಫ್.ಎಂ. ಡಬಾಲಿ ಹೈಸ್ಕೂಲ್‌ನಲ್ಲಿ ಈಚೆಗೆ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಮತ್ತು ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂಗವಿಕಲ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪಾಲಕರು ಹಿಂದೇಟು ಹಾಕಬಾರದು. ಅಂಗವಿಕಲತೆ ದೇವರ ಶಾಪವಲ್ಲ. ವೈಜ್ಞಾನಿಕ ಕಾರಣ ತಿಳಿಯದೇ ಹತ್ತಿರದ ಸಂಬಂಧಿಕರೊಂದಿಗೆ, ರಕ್ತ ಸಂಬಂದಿಗಳಲ್ಲಿ ವಿವಾಹ ಸಂಬಂಧ ಬೆಳೆಸುವುದರಿಂದಾಗಿ ಅಂಗವಿಕಲತೆ ಉಂಟಾಗುತ್ತಿದ್ದು, ಸಮಾಜ ಇದನ್ನು ಅರಿತುಕೊಳ್ಳಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಜೆ.ಬಿ. ಗುಡಿ ಪ್ರಾಸ್ತಾವಿಕ ಮಾತನಾಡಿದರು. ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ ಕಾರ್ಯಕ್ರಮ ಉದ್ಘಾಟಿಸಿದರು. ಎಂ.ಎಚ್. ಕಂಬಳಿ ವಿಶ್ವವಿಕಲ ಚೇತನ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ಪಪಂ ಉಪಾಧ್ಯಕ್ಷೆ ಮೀನಾಕ್ಷಿ ತಳವಾರ, ಶಿಕ್ಷಣ ಸಮಿತಿ ಅಧ್ಯಕ್ಷ ಡಿ.ಎನ್. ಡಬಾಲಿ, ಚನ್ನವೀರಪ್ಪ ಮಣ್ಣೂರ, ಎಸ್.ವಿ. ಅಂಗಡಿ, ಆರ್.ಎಂ. ಶಿರಹಟ್ಟಿ ಇದ್ದರು. ಜಿ.ಬಿ. ಚಿಂಚಲಿ ಸ್ವಾಗತಿಸಿದರು. ಡಿ.ಎಚ್. ಪಾಟೀಲ ನಿರೂಪಿಸಿದರು. ಎಚ್.ಆರ್. ಬೆನಹಾಳ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement