ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೇತ್ರಗಳ ಬಗ್ಗೆ ಜಾಗೃತಿ ವಹಿಸಿ: ರೂಪಾ

Vishwanath S
Updated On : 7 Dec 2013, 10:55 am

ನರಗುಂದ: ಪ್ರತಿಯೊಬ್ಬರಿಗೂ ನೇತೃತ್ವವು ಅತ್ಯವಶ್ಯಕವಾಗಿದ್ದು, ನೇತ್ರಗಳಲ್ಲಿ ಏನಾದರೂ ಅಲ್ಪಪ್ರಮಾಣದ ದೋಷಗಳು ಕಂಡುಬಂದಲ್ಲಿ ಕೂಡಲೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಡಾ. ರೂಪಾ ಹಿರೇಮಠ ಹೇಳಿದರು.
ಅವರು ಪಟ್ಟಣದ ಕಾಡಸಿದ್ದೇಶ್ವರ ಮಠದಲ್ಲಿ ಗುರುವಾರ ಪ್ರಜ್ವಲ ಪಿ.ಸಿ. 15ನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ಜಿಲ್ಲಾ ಅಂಧತ್ವ ನಿವಾರಣೆ ಸಂಸ್ಥೆ ಗದಗ, ಪಾರ್ವತಿ ಸ್ವಯಂ ಸೇವಾಸಂಸ್ಥೆ ಅಳ್ನಾವರ, ವಿಶ್ವ ಮದ್ವಮಹಾಪರಿಷತ್, ಗುರು ಮಹಿಪತಿರಾಜ ನೇತ್ರಾ ಸೇವಾ ಸಂಸ್ಥೆ, ಡಾ.ಎಂ.ಎಂ.ಜೋಶಿ ನೇತ್ರಾ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಹಾಗೂ ಚನ್ನಬಸವೇಶ್ವರ ಕೃಷಿ ಅಭಿವೃದ್ದಿ ರೈತ ಶಕ್ತಿ ಸಂಘ ನರಗುಂದ ಆಶ್ರಯದಲ್ಲಿ ಜರುಗಿದ ಉಚಿತ ನೇತ್ರಾ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭ ಡಾ. ಡಿ.ಜಿ.ಹಿರೇಮಠ, ಕೃಷ್ಣಾ ಮಾಹಲಿಮನಿ, ಧರ್ಮರಾಜಪ್ಪ ತೆಗ್ಗಿನಮನಿ, ವೀಣಾ, ಶೃತಿ, ಬಾಬಾ, ಪಿ. ಚನ್ನಬಸವರಾಜ, ಚನ್ನಪ್ಪ ಕಟಗಿ, ಈಶ್ವರ ಯಾದವ ಮತ್ತು ರೈತ ಸಂಘಟನೆಯ ಪದಾಧಿಕಾರಿಗಳು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement