ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗದಗ ಟಾಸ್ಕ್ಫೋರ್ಸ್ ಸಮಿತಿ ಸಭೆ: ಶೇಂಗಾ, ಸೂರ್ಯಕಾಂತಿಗೆ ಬೆಂಬಲ ಬೆಲೆ ನಿಗದಿ

Rashmi Kasaragodu
Updated On : 9 Dec 2013, 11:18 am

ಗದಗ:  ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯ ತುರ್ತು ಸಭೆಯಲ್ಲಿ ಶೇಂಗಾಕ್ಕೆ ರು. 4 ಸಾವಿರ ಹಾಗೂ ಸೂರ್ಯಕಾಂತಿಗೆ ರು. 3700ರಂತೆ ಬೆಂಬಲ ಬೆಲೆಯಲ್ಲಿ ಖರೀದಿಸಲು ತೀರ್ಮಾನಿಸಲಾಗಿದೆ.
ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಾರಾಟ ಮಂಡಳಿ ಮೂಲಕ (ಕೆಒಎಫ್) ಜಿಲ್ಲೆಯ 21 ಕೇಂದ್ರಗಳಾದ ಗದಗ ತಾಲೂಕಿನ ಬಳಗಾನೂರ, ಹೊಂಬಳ, ಸೊರಟೂರ, ಮುಳಗುಂದ, ನಾಗಾವಿ, ಹರ್ತಿ, ಮುಂಡರಗಿ ತಾಲೂಕಿನ ಬರದೂರ, ಕಲಕೇರಿ, ನರಗುಂದ ತಾಲೂಕಿನ ಕಣಕಿಕೊಪ್ಪ, ಶಿರೋಳ, ಚಿಕ್ಕನರಗುಂದ, ರೋಣ ತಾಲೂಕಿನ ಹಿರೇಹಾಳ, ಅಬ್ಬಿಗೇರಿ, ಸೂಡಿ, ನರೇಗಲ್, ಸವಡಿ, ಜಕ್ಕಲಿ, ಬೆಳವಣಕಿ, ಶಿರಹಟ್ಟಿ ತಾಲೂಕಿನ ರಣತೂರ, ಮಾಗಡಿ, ಶಿಗ್ಲಿ ಈ ಕೇಂದ್ರಗಳಲ್ಲಿ ಎಣ್ಣೆ ಬೀಜ ಸಹಕಾರಿ ಸಂಘಗಳ ಮೂಲಕ ಖರೀದಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ರೈತರು ತಮ್ಮ ಎಫ್ಎಕ್ಯೂ ಗುಣಮಟ್ಟದ ಶೇಂಗಾ ಮತ್ತು ಸೂರ್ಯಕಾಂತಿಯನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement