ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ
ಲಕ್ಷ್ಮೇಶ್ವರ: ಪಟ್ಟಣದ ಬಿಜೆಪಿ ಕಾರ್ಯಕರ್ತರು ಹಾಗೂ ನಮೋ ಬ್ರಿಗೇಡ್ನ ಸದಸ್ಯರು ಉತ್ತರ ಭಾರತ 4 ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರಿಂದ ಭಾನುವಾರ ಮಧ್ಯಾಹ್ನ ಹೊಸ ಬಸ್ ನಿಲ್ದಾಣದ ಹತ್ತಿರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಅಧ್ಯಕ್ಷ ನಾಗರಾಜ ಕುಲಕರ್ಣಿ ಮಾತನಾಡಿದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ಚಂಬಣ್ಣ ಬಾಳಿಕಾಯಿ, ಸೋಮಣ್ಣ ಮುಳಗುಂದ, ಜಿಪಂನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ, ನಾಗರಾಜ ಚಿಂಚಲಿ ಪುರಸಭೆ ಸದಸ್ಯ ಗಣೇಶ ಬೇವಿಮರದ, ರಾಮಣ್ಣ ರಿತ್ತಿ, ಮಂಜುನಾಥ ಮಾಗಡಿ, ನೀಲಪ್ಪ ಹತ್ತಿ, ಆರ್.ಡಿ. ಕೆಂಚಕ್ಕನವರ, ಚಂದ್ರು ಹಂಪಣ್ಣವರ, ವಿನಯ ಪಾಟೀಲ, ಶೇಖಪ್ಪ ಬೂದಿಹಾಳ, ಜಗದೀಶಗೌಡ ಪಾಟೀಲ, ಮಹೇಶ ಹಾದಿಮನಿ, ಶಿವಾನಂದ ಸವಣೂರ, ಬಸವರಾಜ ಅರಳಿ, ರಾಘು ಪೂಜಾರ್, ಪ್ರೇಮ್ ಶೇಠ, ದೇವಪ್ಪ ಕುಂಬಾರ, ಸತೀಶ ಮೆಕ್ಕಿ, ಅಮರೇಶ ಗಾಂಜಿ, ವಿಜಯ ಕುಂಬಾರ, ಪ್ರವೀಣ ಬೊಮಲೆ, ಸತೀಶ ಅಳಗುಂಡಿ, ಅರುಣ ಪಾಟೀಲ,ಗಂಗಾಧರ ಮೆಣಸಿನಕಾಯಿ, ಮೊದಲಾದವರು ಬಿಜೆಪಿ ಗೆಲವಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.