ಬಿಜೆಪಿ ಗೆಲವು: ಸಂಭ್ರಮ
ಶಿರಹಟ್ಟಿ: ದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಬೆಂಬಲದೊಂದಿಗೆ ಸರ್ಕಾರ ರಚಿಸಲಿದೆ ಎಂಬ ಮೂನ್ಸೂಚನೆಯಾಗಿ ಉತ್ತರ ಭಾರತದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅತ್ಯಧಿಕ ಸಂಖ್ಯೆಯಲ್ಲಿ ಆಯ್ಕೆಯಾಗಿ ಜನಮನ್ನಣೆ ಗಳಿಸಿದೆ. ಇದಕ್ಕೆ ಮುಂದಿನ ಪ್ರಧಾನಿಯನ್ನಾಗಿ ನರೇಂದ್ರ ಮೋದಿಯವರನ್ನು ಬಿಂಬಿಸಿರುವುದೇ ಕಾರಣ ಎಂದು ಪಟ್ಟಣ ಪಂಚಾಯತ ಸದಸ್ಯ ಗೂಳಪ್ಪ ಕರಿಗಾರ ಹೇಳಿದರು.
ಬಿಜೆಪಿ ಮುಖಂಡರು ಭಾನುವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಧ್ವಜ ಹಿಡಿದು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ ನಂತರ ಮಾತನಾಡಿದರು.
ವಿಜಯೋತ್ಸವದಲ್ಲಿ ನಗರ ಘಟಕದ ಅಧ್ಯಕ್ಷ ಶಶಿಧರ ರಾನಡೆ, ಮುಖಂಡ ರಾಮಣ್ಣ ಡಂಬಳ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಜಾನು ಲಮಾಣಿ, ಬೀರಪ್ಪ ಸ್ವಾಮಿ, ಬಾಬು ತಹಸೀಲ್ದಾರ್, ಆನಂದ ಸೊರಟೂರ, ಸುರೇಶ ಅಕ್ಕಿ, ಶಶಿಧರ ಮಣ್ಣೂರ, ಶಿವಪುತ್ರಪ್ಪ ಹತ್ತಿಕೋಟಿ, ರಮೇಶ ತುಳಿ, ಮಲ್ಲಪ್ಪ ಸಿಂಧೋಗಿಮಠ, ಶಿವಾನಂದ ಬಟ್ಟೂರ, ಮಂಜು ಸುಣಗಾರ, ಮುತ್ತು ಚಕ್ರಸಾಲಿ, ಕಾಳಪ್ಪ ಬಡಿಗೇರ, ತಿಪ್ಪಣ್ಣ ಲಮಾಣಿ ಮತ್ತಿತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.