ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭಾಷೆ ಬಗ್ಗೆ ಉದಾಸೀನ ಬೇಡ

Rashmi Kasaragodu
Updated On : 9 Dec 2013, 11:19 am

ನರಗುಂದ: ಕನ್ನಡ ಭಾಷೆ ಅತಿ ಹೆಚ್ಚು ಇತಿಹಾಸ ಹೊಂದಿದ್ದು, ಇಂಥ ಭಾಷೆಯ ಮೇಲೆ ಕನ್ನಡಿಗರು ಉದಾಸೀನ ಮಾಡಬಾರದು ಎಂದು ಭೈರನಹಟ್ಟಿ ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ಪಟ್ಟಣದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಕನ್ನಡ ಸಂಘದ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಇಂದು ಅನ್ಯ ಭಾಷೆಗಳಿಂದ ಈ ಭಾಷೆ ಬೆಳವಣಿಗೆ ಕುಂಠಿತಗೊಂಡಿದೆ. ಪ್ರಜ್ಞಾವಂತರೆ ತಮ್ಮ ಮಕ್ಕಳಿಗೆ ಕನ್ನಡ ಕಲಿಸದೆ ಅವರ ಪ್ರತಿಷ್ಠೆಗೋಸ್ಕರ ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ಅವರೆ ಕನ್ನಡ ಭಾಷೆ ಬೆಳವಣಿಗೆ ತಡೆಯಾಗಿದ್ದಾರೆ. ಅದಕ್ಕೆ ಮುಂದಿನ ದಿನಗಳಲ್ಲಿ ರಾಜ್ಯ ಎಲ್ಲ ಕನ್ನಡಿಗರ ಶ್ರೀಮಂತ ಭಾಷೆಯಲ್ಲಿ ಅತಿ ಶ್ರೀಮಂತ ಭಾಷೆಯಾದ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿದೆ ಎನ್ನುವುದು ಉತ್ತಮ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಗಿರೀಶ ಹಿರೇಮಠ, ಸಿ.ಎಸ್. ಸಾಲೂಟಿಗಿಮಠ, ಬಸವರಾಜ ಹಲಕುರ್ಕಿ, ಎಸ್.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement