ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಗಾಗಿ ಧರಣಿ

Rashmi Kasaragodu
Updated On : 9 Dec 2013, 11:17 am

ಕನ್ನಡಪ್ರಭ ವಾರ್ತೆ, ಗದಗ, ಡಿ. 8
ಅನಿಷ್ಟ ಮಡೆಸ್ನಾನ-ಪಂಕ್ತಿಭೇದ ವಿರೋಧಿಸಿ ಹಾಗೂ ಮೂಢನಂಬಿಕೆ ವಿರೋಧಿ ಪ್ರತಿಬಂಧಕ ಕಾಯ್ದೆ ಜಾರಿಗೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ನಗರದ ಗಾಂಧಿ ವೃತ್ತದಲ್ಲಿ ಧರಣಿ ನಡೆಸಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐನ ಜಿಲ್ಲಾ ಮುಖಂಡ ಮಹೇಶ ಹಿರೇಮಠ ಮಾತನಾಡಿ, ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಾಗೂ ರಾಜ್ಯದ ಸುಮಾರು 65 ಕಡೆಗಳಲ್ಲಿ ಬ್ರಾಹ್ಮಣರು ಊಟ ಮಾಡಿದ ಎಂಜಲು ಎಲೆಯ ಮೇಲೆ ಉರುಳಿದರೆ ಚರ್ಮ ರೋಗಗಳು ಮತ್ತಿತರ ಕಾಯಿಲೆಗಳು ವಾಸಿಯಾಗುವವು ಎಂಬ ಮೌಢ್ಯ ಆಚರಣೆಗಳು ರಾಜ್ಯದ ಹಲವೆಡೆ ನಡೆಯುತ್ತಿವೆ. ಇದು ಜಾತಿ ತಾರತಮ್ಯದ ವ್ಯವಸ್ಥೆಯಾಗಿದೆ. ಪಂಕ್ತಿಭೇದವೂ ಜಾತಿ ತಾರತಮ್ಯದ ಮತ್ತೊಂದು ಆಚರಣೆಯಾಗಿದೆ. ಈ ಬಗೆಯ ಎಲ್ಲ ಅನಿಷ್ಟ ಆಚರಣೆಗಳನ್ನು ನಿಷೇಧಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ಎಂ.ಎಸ್. ಹಡಪದ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೊಳಿಸಲು ಹೊರಟಿರುವ ಮಹಾರಾಷ್ಟ್ರ ಮಾದರಿ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ವ್ಯಾಪಕ ಚರ್ಚೆ, ಸಮಾಲೋಚನೆ ಸಾರ್ವಜನಿಕ ತಿಳಿವಳಿಕೆ ಬಳಿಕ ಕರಡು ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗಿಕರಿಸಬೇಕೆಂದು ಒತ್ತಾಯಿದರು. ಸಂಘಟನೆ ಜಿಲ್ಲಾ ಸಂಚಾಲಕ ಮಹಗುಂಡಪ್ಪ ಅಂಗಡಿ ಮಾತನಾಡಿದರು.
ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ನೆಲ್ಸನ್ ಮಂಡೇಲಾ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರತಿಭಟನಾ ಧರಣಿಯಲ್ಲಿ ಶಿವು ಚೌಹಾಣ್ ಫೀರು ರಾಠೋಡ್, ವಿಠಲ ನಾಯ್ಕ, ಸಾಗರ ಮಾಡೊಳಿ, ಮಾನವ್ವ ರಾಠೋಡ, ದೇವಪ್ಪ ನಾಯ್ಕ ಶಿವಾಜಿ ಗಡ್ಡದ, ಮೈಲಾರಪ್ಪ ಮಾದರ, ಬಸವರಾಜ ಶೀಲವಂತರ, ವೀರಣ್ಣ ಕುಂಬಾರ, ಸಿದ್ದನಗೌಡ ಪಾಟೀಲ, ಸಾವಿತ್ರಿ ಲಮಾಣಿ, ಬಾಲಕೃಷ್ಣ ಜಾಡಬಂದಿ, ಶಿವರಾಜ ಮುದಿಯನಗುಡಿ ಮತ್ತಿತರರು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement