ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂಭ್ರಮಾಚರಣೆ

Rashmi Kasaragodu
Updated On : 9 Dec 2013, 11:19 am

ಗದಗ: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಬಿಜೆಪಿ ಮುನ್ನಡೆ ಸಾಗಿಸುತ್ತಿದ್ದಂತೆ ಭಾನುವಾರ ನಗರದ ಹುಯಿಲಗೋಳ ನಾರಾಯಣ ರಾವ್ ವೃತ್ತದಲ್ಲಿ ಜಿಲ್ಲಾ ಶ್ರೀರಾಮ ಸೇನೆ ಘಟಕದ ವತಿಯಿಂದ ಸಂಭ್ರಮ ಆಚರಿಸಲಾಯಿತು. ದೇಶದ ಜನತೆ ಕಾಂಗ್ರೆಸ್ ಆಡಳಿತ ವಿರೋಧಿ ಮತ ಚಲಾಯಿಸುವ ಮೂಲಕ, ಸನಾತನ ಹಿಂದುತ್ವಕ್ಕೆ ಮತ್ತೆ ಮಣೆ ಹಾಕಿದ್ದಾರೆ.  ಎಂದು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ರಾಜು ಖಾನಪ್ಪನವರ, ಮಹೇಶ ರೋಖಡೆ, ಸುರೇಶ ಹಾದಿಮನಿ, ಹುಲಗಪ್ಪ ವಾಲ್ಮೀಕಿ, ಮಾರುತಿ ದಹಿಂಡೆ, ರಾಜು ಗಡ್ಡಿ, ಅರುಣ ಬಿಂಗಿ, ಕುಮಾರ ನಾಲ್ವಾಡ, ಬಸವರಾಜ ಕುರ್ತಕೋಟಿ, ಈರಣ್ಣ ಅಕ್ಕಸಾಲಿಗರ, ಚೇತನ ಕೊತಬಾಳ ಮುಂತಾದವರು ಹಾಜರಿದ್ದರು.
ರಾಜ್ಯಮಟ್ಟಕ್ಕೆ ಆಯ್ಕೆ
ರೋಣ: ನರಗುಂದದಲ್ಲಿ ಈಚೆಗೆ ಜರುಗಿದ ಬೆಳಗಾವಿ ವಿಭಾಗ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಬಾಲಕರ ಪಂದ್ಯಾವಳಿಯಲ್ಲಿ ಪಟ್ಟಣದ ಕೆ.ವಿ. ಶಾಂತಗೇರಿಮಠ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಾದ ಸಂತೋಷ ಜಕ್ಕನಗೌಡ್ರ, ವಿಕ್ರಂ ಹಿರೇಮನಿ, ಅಮೀರ ಕೊಪ್ಪಳ, ವೀರೇಶ ಶಿರೂರ ಮತ್ತು ಬಸವರಾಜ ಹೊಸಳ್ಳಿ ಅವರನ್ನು ಹಲವರು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement