ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ

Lingaraj Badiger
Updated On : 10 Dec 2013, 11:31 am

ಕನ್ನಡಪ್ರಭ ವಾರ್ತೆ, ಗದಗ, ಡಿ. 9
ಡಾ. ಬಿ.ಆರ್. ಅಂಬೇಡ್ಕರ್ ಅವರು ನಮ್ಮ ಭಾರತ ದೇಶಕ್ಕೆ ಸಂವಿಧಾನ ರಚಿಸಿಕೊಟ್ಟ ಮಹಾನ್ ವ್ಯಕ್ತಿಗಳಾಗಿದ್ದಾರೆ. ಅವರ ಆದರ್ಶಗಳು ಸಾರ್ವಕಾಲಿಕ ಎಂದು ಯುವಮುಖಂಡ ಸತೀಶ ಹೂಲಿ ಹೇಳಿದರು.
ಅವರು ಈಚೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಟಗೇರಿ ಶಾಖೆ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಮಹಾಪರಿನಿರ್ವಾಣ ನಿಮಿತ್ತ ನಗರಸಭೆ ಆವರಣದಲ್ಲಿರುವ ಡಾ. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದರು.
ಮಹಾದೇವ ಚಲವಾದಿ ಮಾತನಾಡಿ, ಇಂದಿನ ಯುವ ಪೀಳಿಗೆ ಇಂತಹ ರಚನಾತ್ಮಕ ಕಾರ್ಯಗಳಲ್ಲಿ ಹೆಚ್ಚು ಪಾಲ್ಗೊಂಡು ಬುದ್ಧ-ಬಸವ-ಅಂಬೇಡ್ಕರ್ ವಿಚಾರಗಳನ್ನು ಎಲ್ಲರಿಗೂ ಮುಟ್ಟಿಸುವ ಕಾರ್ಯ ಆಗಬೇಕಾಗಿದೆ.
ಹೀಗಾಗಿ ಯುವಕರು ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುವುದರ ಜತೆಗೆ ಅಂಬೇಡ್ಕರ್ ಚಿಂತನೆಗಳನ್ನು ಜಾರಿಗೆ ತರಲು ಪ್ರಯತ್ನಿಸಿ ಎಂದರು.
ಗುರುಮೂರ್ತಿ ಚಲವಾದಿ, ಶಂಕರ ಬಿಳಿಯಲಿ, ಕಾಶಪ್ಪ ಕಾಳಿ, ದುರ್ಗಪ್ಪ ಚಲವಾದಿ, ಸಂತೋಷ ಕವಲೂರ, ಷಣ್ಮುಖ ಬಿಳಿಯಲಿ, ಮಲ್ಲು ಬಾರಕೇರ, ಶರಣಪ್ಪ ಮೋಖಾಸಿ, ಶಿವು ಅಂದ್ರಾಳ, ಮಂಜುನಾಥ ಚಲವಾದಿ, ಲವಕುಮಾರ ಬಿಳಿಯಲಿ, ಕಿಟ್ಟು ಬಿಳಿಯಲಿ, ಗಣೇಶ ಚಲವಾದಿ, ಮಂಜುನಾಥ ತಳಕಲ್ಲ, ಶ್ರೀಕಾಂತ ಮಳಲಿ, ನಾಗರಾಜ ಬಿಳಿಯಲಿ, ಆನಂದ ಚಲವಾದಿ, ಮಂಜುನಾಥ ಕಾಳಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement