ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಂಬೇಡ್ಕರ್‌ರಿಂದ ದಲಿತರ ಬಾಳಲ್ಲಿ ಬೆಳಕು

Lingaraj Badiger
Updated On : 10 Dec 2013, 11:38 am

ಗದಗ:  ದಲಿತರ ಬಾಳಿಗೆ ಬೆಳಕು ಕೊಟ್ಟ ಡಾ. ಬಿ.ಆರ್. ಅಂಬೇಡ್ಕರ್ ತತ್ವಾದರ್ಶ ಪರಿಪಾಲನೆಯಲ್ಲಿ ಎಲ್ಲರೂ ಗಮನ ನೀಡಬೇಕು ಎಂದು ದಲಿತ ಮುಖಂಡ ಕೊಟ್ರೇಶ ಕಡಿಯವರ ಹೇಳಿದರು.
ಅವರು ಹುಯಿಲಗೋಳ ಗ್ರಾಮದಲ್ಲಿ ಅಂಬೇಡ್ಕರ್ 57ನೇ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ದಲಿತ ಸಮೂಹ ಎಲ್ಲ ಸಮಾಜದ ಬಡವರಿಗೆ ಸರ್ಕಾರದ ಸೌಲಭ್ಯ ಕೊಡಿಸುವಲ್ಲಿ ಮುಂದಾಗಿ. ಅತಿ ಹಿಂದುಳಿದಂತಹ ಸಮಾಜದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಅಂಬೇಡ್ಕರ್ ಶ್ರಮಿಸಿದ್ದಾರೆ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಭೀಮರಾವ್ ಕುಲಕರ್ಣಿ ಮಾತನಾಡಿ, ದಲಿತರ ಅಭಿವೃದ್ಧಿಗೆ ಶಾಶ್ವತ ಹಕ್ಕುಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದು, ಅದನ್ನು ಜಾರಿಗೆ ತರುವಲ್ಲಿ ಎಲ್ಲ ರಾಜಕೀಯ ಪಕ್ಷಗಳು ಶ್ರಮಿಸಬೇಕು ಎಂದರು. ಜೇನೂಗೂಡು ಜಾನಪದ ಕಲಾತಂಡದ ಕಲಾವಿದ ಬಸವರಾಜ ಈರಣ್ಣವರ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ದಲಿತರು ಮುಂದೆ ಬಂದು ಸಮಾಜದಲ್ಲಿನ ಅನಿಷ್ಠತೆ ತೊಲಗಿಸಲು ಮುಂದಾಗಬೇಕು ಎಂದರು. ಅಧ್ಯಕ್ಷತೆಯನ್ನು ಪಂಚಾಕ್ಷರಯ್ಯ ಹಿರೇಮಠ ವಹಿಸಿದ್ದರು. ಸಣ್ಣಮಕಲಪ್ಪ ಕಾಳೆ, ರಮೇಶ ಕಡಿ, ಮೈಲಾರಪ್ಪ ಹುರಕನವರ, ಪ್ರಕಾಶ ಕಾಳೆ, ಸುರೇಶ ಬನ್ನಿಕೋಪ್ಪ, ಪಿಡಿಒ ಬಿ.ಎಚ್. ಮಣ್ಣೂರು, ಲಂಕೆಪ್ಪ ಭಜಂತ್ರಿ, ದುರಗಪ್ಪ ಈರಗಾರ, ಗೀರಿಜಪ್ಪ ಪೂಜಾರ, ಕುಮ್ಮಣ್ಣ ಕಲಗುಡಿ, ಶಂಕ್ರಪ್ಪ ಪೂಜಾರ ಉಪಸ್ಥಿತರಿದ್ದರು.
ಯಾತ್ರಿಕರಿಗೆ ಬೀಳ್ಕೊಡುಗೆ
ಗದಗ: ಭಾರತದ ಉತ್ತರ ಪೂರ್ವ ರಾಜ್ಯ ಓಡಿಶಾದ ಪವಿತ್ರ ಯಾತ್ರಾ ಸ್ಥಳ ಪುರಿಯಲ್ಲಿರುವ ಜಗತ್ಪ್ರಸಿದ್ಧ ಜಗನ್ನಾಥ ಸ್ವಾಮಿ ದೇವಾಲಯ ಹಾಗೂ ಕೋನಾರ್ಕದಲ್ಲಿರುವ ವಿಶ್ವದ ಏಕೈಕ ಸೂರ್ಯ ದೇವಾಲಯದ ದರ್ಶನಕ್ಕಾಗಿ ಧಾರ್ಮಿಕ ಯಾತ್ರೆಯನ್ನು ಕೈಗೊಳ್ಳುತ್ತಿರುವ ಬೇಟಗೇರಿ ಭಾಗದ ಗೆಳೆಯರ ಬಳಗದ ಸದಸ್ಯ ವೀರಣ್ಣ ಮುಳ್ಳಾಳ, ಶಿವಾಜಿಸಿಂಗ ಗಂಗಾವತಿ, ಗಣೇಶಸಿಂಗ ಬ್ಯಾಳಿ, ದೇವಣ್ಣ ಹೂಗಾರ, ಭೋಜಪ್ಪ ಹೆಗ್ಗಡಿ ಮುಂತಾದವರಿಗೆ ಈಚೆಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು. ಈಗಾಗಲೇ ಈ ಬಳಗದ ಸದಸ್ಯರು 12 ಜ್ಯೋತಿರ್ಲಿಂಗಗಳ ಪೈಕಿ 10 ಜ್ಯೋತಿರ್ಲಿಂಗಗಳ ದರ್ಶನ ಪಡೆದಿರುವುದು ವಿಶೇಷವಾಗಿದೆ.
ಸಮಾರಂಭದಲ್ಲಿ ಪರಶುರಾಮ ಕಟ್ಟಿಮನಿ, ಅಶೋಕ ಕಟ್ಟಿಮನಿ, ರಾಮಣ್ಣ ಕಡೇದ, ಎಂ.ಬಿ. ನವಲೂರ, ಶಿವಪುತ್ರಪ್ಪ ಕುಂದಗೋಳ, ಮುರಿಗೆಪ್ಪ ಆಲೂರ, ಸಂಗಪ್ಪ ಗುಡಿಮನಿ, ಯಲ್ಲಪ್ಪ ಪಟ್ಟಣಶೆಟ್ಟಿ, ಸಂಗಪ್ಪ ಪಡೆಸೂರ, ಬಸೆಟ್ಟಪ್ಪ ಕಣವಿ, ಕೊಟ್ರಪ್ಪ ಹರ್ಲಾಪುರ, ಬಸವಂತಪ್ಪ ಮಾರನಬಸರಿ, ಶಿವಪುತ್ರಪ್ಪ ಬೆಂತೂರ, ಪ್ರಕಾಶ ಮ್ಯಾಗೇರಿ, ಶರಣಪ್ಪ ಅಣ್ಣಿಗೇರಿ, ಸುದೀಪ ಕಣವಿ, ಯುವಕ ಮಂಡಳದ ಸದಸ್ಯರು, ದೇವಿಸಿಂಗ ದೊಡ್ಡಮನಿ, ದೇವಿಸಿಂಗ ಬ್ಯಾಳಿ, ವಿಷ್ಣು ಪಾಸ್ತೆ, ಅರ್ಜುನಸಿಂಗ ಪುಲಾನೇಕರ, ಶ್ರೀನಿವಾಸ ಚ್ಯಾಗಿ, ಗಿರಿಯಪ್ಪ ಅಂಟಿನ ಮತ್ತು ಬೆಟಗೇರಿ ಸಾರ್ವಜನಿಕ ಗಜಾನನೋತ್ಸವ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಗುತ್ತಿಗೆದಾರರ ಪಾತ್ರ ಪ್ರಮುಖ: ಶಾಸಕ ಪಾಟೀಲ
ಕನ್ನಡಪ್ರಭ ವಾರ್ತೆ, ರೋಣ, ಡಿ. 9
ರಾಜ್ಯದ ಅಭಿವೃದ್ಧಿಯಾಗಬೇಕಾದಲ್ಲಿ ಗುತ್ತಿಗೆದಾರರ ಪಾತ್ರ ಪ್ರಮುಖವಾಗಿದೆ. ಆ ದಿಸೆಯಲ್ಲಿ ಗುತ್ತಿಗೆದಾರರು ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡುವಂತೆ ಶ್ರಮವಹಿಸುವುದು ಮುಖ್ಯವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.  ಅವರು ಸೋಮವಾರ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ತಾಲೂಕು ಗುತ್ತಿಗೆದಾರರು, ಜಿಪಂ, ಲೋಕೋಪಯೋಗಿ ಇಲಾಖೆ ಮತ್ತು ಪರಸಭೆ ಗುತ್ತಿಗೆದಾರರ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ, ಸಾನ್ನಿಧ್ಯ ವಹಿಸಿದ್ದ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ಮಾತನಾಡಿದರು. ಸಮಾರಂಭದಲ್ಲಿ ವಿ.ಆರ್. ಗುಡಿಸಾಗರ, ಮಿಥುನ ಪಾಟೀಲ, ಗುತ್ತಿಗೆದಾರ ಸಂಘದ ಸಲಹೆಗಾರ ಶಿವರಡ್ಡಿ ದಾನರಡ್ಡಿ, ಅಶೋಕ ಕೊಪ್ಪದ, ಅಶೋಕ ಕಣ್ಣೂರ, ಎಂ.ವಿ. ಮೇಟಿ, ಎಸ್.ಎಚ್. ಜಾವೂರಮಠ, ವೀರೇಶ ನವಲಗುಂದ, ಬಿ.ವಿ. ರಡ್ಡೇರ, ಎಂ.ವಿ. ಗಾಣಿಗೇರ, ಸಿ.ವೈ. ಬಾವಿಮನಿ, ಎಂ.ವಿ. ಮುಗಳಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಗುತ್ತಿಗೆದಾರರು ಉಪಸ್ಥಿತರಿದ್ದರು. ವೀರಣ್ಣ ಶಿರೋಲ ನಿರೂಪಿಸಿದರು. ರಾಜಣ್ಣ ಗಿರಡ್ಡಿ ಸ್ವಾಗತಿಸಿದರು. ಶಿವಕುಮಾರ ಬೆಲ್ಲದ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement