ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ಖಚಿತ: ಕಳಕಪ್ಪ ಬಂಡಿ ವಿಶ್ವಾಸ

Lingaraj Badiger
Updated On : 10 Dec 2013, 11:31 am

ಗದಗ: ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯೆಂದೇ ಬಿಂಬಿತ ದೇಶದ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆ ಮೀರಿ ಗೆಲುವು ಪಡೆದಿದ್ದು, ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತದ ದಿಗ್ವಿಜಯ ಖಚಿತ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ಥಾನದಲ್ಲಿ ಬಿಜೆಪಿ ಬಹುಮತದ ಗೆಲುವು ಸಾಧಿಸಿದ್ದು, ದೇಶದ ರಾಜಧಾನಿ ದೆಹಲಿಯಲ್ಲಿ ಅಧಿಕಾರರೂಢ ಕಾಂಗ್ರೆಸ್ ಸರ್ಕಾರವನ್ನು ಜನತೆ ಕೆಳಗಿಳಿಸಿ ಬಿಜೆಪಿಗೆ ಅಧಿಕಾರಕ್ಕೇರುವ ಅತ್ಯಂತ ಸಮೀಪದ ಪಕ್ಷವಾಗಿ ಹೊರಹೊಮ್ಮಿಸಿದ್ದಾರೆ. ನಾಲ್ಕೂ ರಾಜ್ಯಗಳ ಮತದಾರರು ಯಾವುದೇ ಪಕ್ಷದ ಹಿತ ವೈಯಕ್ತಿಕ ನಾಯಕರ ಹಿತಾಸಕ್ತಿಗಿಂತ ದೇಶದ ಹಿತ ಮುಖ್ಯವೆಂಬುದನ್ನು ನಿರೂಪಿಸಿದ್ದಾರೆ. ಅಪ್ರತಿಮ ರಾಷ್ಟ್ರಭಕ್ತ, ದಕ್ಷತೆಯ ಆಡಳಿತಗಾರ, ಸರ್ವ ಜನಾಂಗದ ಅಭಿವೃದ್ಧಿಯ ಹರಿಕಾರರಾಗಿರುವ ನರೇಂದ್ರ ಮೋದಿ ಅವರು ಜನತೆಯ ಮನಗೆದ್ದಿದ್ದಾರೆ. ಮೋದಿ ನಾಯಕತ್ವದ ಬಿಜೆಪಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೇಶದ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಸಮಾವೇಶ
ಗದಗ:  ಆಶಾ ಕಾರ್ಯಕರ್ತೆಯರ ಸಂಘದ ಗದಗ ಜಿಲ್ಲಾ ಸಮಿತಿ ವತಿಯಿಂದ ಆಶಾ ಕಾರ್ಯಕರ್ತೆಯರ ಗದಗ ಜಿಲ್ಲಾ ಸಮಾವೇಶವನ್ನು ಡಿ. 10ರಂದು ಬೆಳಗ್ಗೆ 12ಕ್ಕೆ ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಸಂಘಟಿಸಲಾಗಿದೆ. ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಉದ್ಘಾಟಿಸುವರು. ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್ ವಿಶೇಷ ಉಪನ್ಯಾಸ ನೀಡುವರು. ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಮುಂತಾದವರು ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಜಿಲ್ಲಾ ಸಂಘದ ಅಧ್ಯಕ್ಷೆ ಭಾಗ್ಯಜ್ಯೋತಿ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement