ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಡಾ. ಬಿ.ಆರ್. ಅಂಬೇಡ್ಕರ್ 57ನೇ ಮಹಾ ಪರಿನಿರ್ವಾಣ ಕಾರ್ಯಕ್ರಮ

Lingaraj Badiger
Updated On : 10 Dec 2013, 11:37 am

ಗದಗ:  ನಗರದಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಂಸ್ಥೆಯ ವಿಭಾಗೀಯ ಕಚೇರಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಸ್ಸಿ, ಎಸ್ಟಿ ನೌಕರರ ಸಂಘ ಗದಗ ವತಿಯಿಂದ ಶುಕ್ರವಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 57ನೇ ಮಹಾ ಪರಿನಿರ್ವಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಸಿ. ಗದ್ದಿಕೇರಿ ಪುಷ್ಪನಮನ ಅರ್ಪಿಸಿದರು. ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಎಸ್.ಎನ್.ಬಳ್ಳಾರಿ ಉದ್ಘಾಟಿಸಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಅವರ ತತ್ವ, ಆದರ್ಶ ನಮಗೆಲ್ಲರಿಗೂ ನಿರಂತರ ಜ್ಯೋತಿಯ ಮಾರ್ಗದರ್ಶನವಾಗಬೇಕು. ನಮ್ಮ ಮಕ್ಕಳನ್ನು ಒಳ್ಳೆಯ ಶಿಕ್ಷಣವಂತರಾನ್ನಾಗಿ ಮಾಡಿ ಅವರ ಕನಸನ್ನು ನನಸಾಗಿಸಿ ಸಮಾಜ ಸೇವೆಯಲ್ಲಿ ಮುನ್ನಡೆಯೋಣ ಎಂದರು. ಪಿ.ಎಲ್.ಡಿ. ಬ್ಯಾಂಕ್‌ನ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕೊಪ್ಪಳ, ಎಸ್.ಬಿ.ಪಡಸಾಲಿ, ಎಂ. ಆಂಜನೇಯ, ರಮೇಶ ಚಲವಾದಿ, ಎಂ.ಎಸ್.ನಾಯ್ಕರ, ಲೆಂಕೆಣ್ಣವರ, ವೆಂಕಟೇಶ ಲಮಾಣಿ, ಮ್ಯಾಟೆಣ್ಣವರ ಮುಂತಾದವರು ಮಾತನಾಡಿದರು. ಎಂ.ವಿ. ಹೊಸಮನಿ, ಎಂ.ಎ. ಖಾದ್ರಿ, ಜಗದೀಶ ಕೋಳಿ ಮುಂತಾದವರು ಉಪಸ್ಥಿತರಿದ್ದರು. ಸತ್ಯನಾರಾಯಣ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement