ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳ ಪ್ರತಿಭೆಗೆ ಶಿಕ್ಷಕರು ಪ್ರೋತ್ಸಾಹಿಸಿ

Lingaraj Badiger
Updated On : 10 Dec 2013, 11:37 am

ನರಗುಂದ:  ಪ್ರತಿಯೊಂದು ಮಗುವಿನಲ್ಲಿ ಉತ್ತಮ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಶಿಕ್ಷಕರಾದವರು ಮಕ್ಕಳಿಗೆ ಸ್ಫೂರ್ತಿ ನೀಡುವ ಮೂಲಕ ಹೊರ ಹಾಕಬೇಕೆಂದು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎಂ. ಕಲಹಾಳ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನ .6 ರ ಶಾಲೆಯಲ್ಲಿ ಈಚೆಗೆ ಜರುಗಿದ ಪ್ರತಿಭಾ ಕಾರಂಜಿಯ ಸ್ಫರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿರುವ ವಿವಿಧ ರೀತಿಯ ಕಲೆ ಹೊರ ಹೊಮ್ಮಿಸಲು ಹಾಗೂ ಪಠ್ಯದ ಜತೆಗೆ ಸಹಪಠ್ಯ ವಿಷಯಗಳ ಅನುಭವ ನೀಡಲು ಶಿಕ್ಷಕರಾದವರು ಪ್ರಯತ್ನಿಸಬೇಕು.
ಅಂದಾಗ ಮಾತ್ರ ಪ್ರತಿಯೊಂದು ಮಗುವಿನಲ್ಲಿ ಉತ್ತಮ ಪ್ರತಿಭೆ ಇರುವುದು ತಿಳಿದು ಬರುತ್ತದೆ. ಪಠ್ಯದ ಜತೆಗೆ ಪಠ್ಯೇತರ ವಿಷಯಗಳ ಬಗ್ಗೆ ಮಕ್ಕಳಿಗೆ ಅನುಭವ ಇದ್ದರೆ ಅದರಿಂದ ಮಕ್ಕಳ ಜಾಣ್ಮೆ ಹೆಚ್ಚಾಗಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕ್ಲಸ್ಟರ್ ಸಂಯೋಜಕ ಶಶಿಧರ ದ್ಯಾವನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಅವರಿಗೆ ಹೊಸ ಹೊಸ ವಿಷಯ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಅಧ್ಯಕ್ಷತೆಯನ್ನು ಬಿ.ಆರ್.ಸಿ. ಸಮನ್ವಧಿಕಾರಿ ಪಿ.ಎಫ್. ಸೋಲಾಪುರಿ ವಹಿಸಿದ್ದರು. ತಾಲೂಕು ನೌಕರ ಸಂಘದ ಅಧ್ಯಕ್ಷ ಡಿ.ಎಚ್. ಅಜ್ಜಿ, ಬಿ.ಬಿ. ಧಾರವಾಡ, ಎಚ್.ವಿ. ಕಣವಿ ಮುಂತಾದವರು ಪಾಲ್ಗೊಂಡಿದ್ದರು. ಬಿ.ಎಂ. ಗಾಣಗೇರ ಸ್ವಾಗತಿಸಿದರು. ಎಸ್.ಎ. ಶಿವಸಿಂಪಗೇರ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement