ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುಂದರ ಸಮಾಜಕ್ಕಾಗಿ ಕಾನೂನಿನ ಜ್ಞಾನ ಅಗತ್ಯ

Mainashree
Updated On : 11 Dec 2013, 11:40 am

ಕನ್ನಡಪ್ರಭ ವಾರ್ತೆ, ರೋಣ, ಡಿ. 10  
ಸಮಾಜದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರ, ಅರಾಜಕತೆ ನಿರ್ಮೂಲನೆ ಮಾಡಿ, ಸುಂದರ ಸಮಾಜ ನಿರ್ಮಾಣವಾಗಲು ಪ್ರತಿಯೊಬ್ಬ ನಾಗರಿಕರಿಗೂ ಕಾನೂನು ಪ್ರಜ್ಞೆ ಅತ್ಯಗತ್ಯವಾಗಿದೆ ಎಂದು ರೋಣ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಐ.ಎಂ. ಪಾಟೀಲ ಹೇಳಿದರು.
ಅವರು ಮಂಗಳವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ರೋಣ ಮತ್ತು ಸರ್ಕಾರಿ ಅಭಿಯೋಜಕರ ಇಲಾಖೆ ಆಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ-2013 ಅಂಗವಾಗಿ ಜರುಗಿದ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಪ್ರತಿಯೊಬ್ಬರಿಗೂ ಕಾನೂನು ಅರಿವು ಮೂಡಿಸಿ, ಉತ್ತಮ ಮತ್ತು ಅಪರಾಧ ಮುಕ್ತ ಸಮಾಜ ನಿರ್ಮಿಸುವ ದಿಸೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಅವುಗಳ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ನಾರಾಯಣ ಆರಿ ಮಾತನಾಡಿ, ಕಾನೂನಿನ ಸರಿಯಾದ ತಿಳಿವಳಿಕೆಯ ಕೊರತೆಯಿಂದ ಇಂದು ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ. ಮಹಿಳಾ ಶೋಷಣೆ, ಅತ್ಯಾಚಾರದಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಇವುಗಳು ನಿಲ್ಲಬೇಕಾದಲ್ಲಿ ಪ್ರತಿಯೊಬ್ಬರಿಗೂ ಕಾನೂನು ಜ್ಞಾನ ಅತಿ ಮುಖ್ಯವಾಗಿದೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಕಾನೂನು ಒಂದೇ ರೀತಿಯಾಗಿದೆ. ಕಾನೂನನ್ನು ಗೌರವಿಸಿ, ಪಾಲನೆ ಮಾಡಿದಲ್ಲಿ ಅದು ನಮ್ಮನ್ನು ರಕ್ಷಿಸುತ್ತದೆ ಎಂದರು.
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಡಿ. ಮಹಾವರಕರ ಉದ್ಘಾಟಿಸಿದರು. ಮಾನವ ಹಕ್ಕುಗಳು ಹಾಗೂ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ-2005 ಕುರಿತು ನ್ಯಾಯವಾದಿ ವಿ.ಡಿ.ಪವಾಸ್ಕರ ಉಪನ್ಯಾಸ ನೀಡಿದರು. ಐ.ಎಂ. ಕುರಿ, ಎಸ್.ಎ.ಅರಹುಣಸಿ, ಎಚ್.ಎಫ್. ಕಾಡದೇವರಮಠ, ಬಿ.ಎಂ. ಕುಂಬಾರ, ಎಲ್.ಎನ್. ಬಾಣದ, ರಾಜೇಂದ್ರ ಉದ್ದಾರ, ವಿ.ಎಸ್.ಬಂಗಾರಿ ಮುಂತಾದವರು ಉಪಸ್ಥಿತರಿದ್ದರು. ವೈ.ಡಿ. ನದಾಫ ಸ್ವಾಗತಿಸಿ, ನಿರೂಪಿಸಿದರು. ಆರ್.ಎಸ್. ಮಾಲಗಿತ್ತಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement