ಸುದ್ದಿ ಸಂಕ್ಷೇಪ
ಶ್ರೀಕಂಠದತ್ತ ಒಡೆಯರ ನಿಧನ: ಶ್ರದ್ಧಾಂಜಲಿ
ಗದಗ: ಶ್ರೀಕಂಠದತ್ತ ನರಸಿಂಹರಾಜ ಒಡೆಯರ ನಿಧನ ಹೊಂದಿದ ನಿಮಿತ್ತ ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆಯ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಸಭೆ ಜರುಗಿತು. ವೇದಿಕೆಯ ಜಿಲ್ಲಾಧ್ಯಕ್ಷ ಕೃಷ್ಣ ಹಡಪದ ಮಾತನಾಡಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ ಅವರು ಸದಾ ಬಡವರ, ರೈತರ ಹಿತಚಿಂತನೆ ಹಾಗೂ ನಿರಂತರವಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದರು. ವೇದಿಕೆಯ ಜಿಲ್ಲಾ ಕಾರ್ಯಾಧ್ಯಕ್ಷ ಶಂಕರ ಮಾನೆ ಮಾತನಾಡಿ, ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ ಅವರ ಸರಳ, ನೇರ ನುಡಿ ಹಾಗೂ ಪ್ರಾಮಾಣಿಕ ನಡವಳಿಕೆ ಸದಾಕಾಲ ನೆನಪಾಗುತ್ತದೆ ಎಂದರು. ವೇದಿಕೆಯ ಜಿಲ್ಲಾ ವೇದಿಕೆಯ ಗೌರವಾಧ್ಯಕ್ಷರಾದ ಪರಶುರಾಮ ಕೊಟೆಕಲ್ಲ, ಉಪಾಧ್ಯಕ್ಷ ಪಾಂಡು ಕಾಳೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜು ಮಾನೆ, ಹೇಮಂತ ವಡ್ಡೇಪಲ್ಲಿ, ದೀಪಕ ಮಾನೆ, ಜಿಲ್ಲಾ ಸಂಚಾಲಕ ಗುರುಮೂರ್ತಿ ಬಾರಬರ, ವೇದಿಕೆಯ ಶಿರಹಟ್ಟಿ ತಾಲೂಕು ಅಧ್ಯಕ್ಷ ನಾಗರಾಜ ಆರೆಪಲ್ಲಿ, ಮುಂಡರಗಿ ತಾಲೂಕು ಅಧ್ಯಕ್ಷ ಗೋವಿಂದರಾಜ ಕರ್ನೂಲ, ಪ್ರಕಾಶ ಬಾರಬರ, ಜಂಬಣ್ಣ ಕಡಮೂರ, ವಿಷ್ಣು ಮಾನೆ, ಶ್ರೀನಿವಾಸ ಶಿಕಾರಿಪುರ, ಸುರೇಶ ಬೂದೂರ, ಮಂಜುನಾಥ ಹಾದಿಮನಿ, ಬಾಪು ಆರಟ್ಟಿ, ಬಸಯ್ಯ ನಂದಿಕೋಲಮಠ, ಬಸವರಾಜ ಬಹದ್ದೂರಬಂಡಿ, ಸಂತೋಷ ಕಬಾಡಿ ಮುಂತಾದವರು ಉಪಸ್ಥಿತರಿದ್ದರು.
ಶ್ರೀಕಂಠದತ್ತ ಒಡೆಯರ ನಿಧನ: ಸಂತಾಪ
ಗದಗ: ಮೈಸೂರು ರಾಜ ಮನೆತನದ ಕೊನೆಯ ಕೊಂಡಿ ಹಾಗೂ ಮಾಜಿ ಲೋಕಸಭಾ ಸದಸ್ಯ ಶ್ರೀಕಂಠದತ್ತ ಒಡೆಯರ ತಮ್ಮ 60ನೇ ವಯಸ್ಸಿನಲ್ಲಿ ನಿಧನರಾಗಿದ್ದು ತುಂಬಾ ನೋವಿನ ಸಂಗತಿಯಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದ್ದಾರೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ ಜನಸಾಮಾನ್ಯರೊಂದಿಗೆ ಬೆರೆತು ಅವರ ಕಷ್ಟದಲ್ಲಿ ಭಾಗಿಯಾಗುತ್ತಿದ್ದರು. ಅವರು ಒಬ್ಬ ಉತ್ತಮ ಲೋಕಸಭಾ ಸದಸ್ಯರಾಗಿಯೂ ಕಾರ್ಯ ಮಾಡಿದ್ದು ಹಾಗೂ ಕೆಎಸ್ಸಿಎ ಅಧ್ಯಕ್ಷರಾಗಿ ರಾಜ್ಯದಲ್ಲಿ ಕ್ರಿಕೆಟ್ ಬೆಳವಣಿಗೆಗೂ ತಮ್ಮ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದಾಗಿ ರಾಜ್ಯಕ್ಕೆ ಬಹಳ ನೋವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಇಂದು ಕೆಡಿಪಿ ಸಭೆ
ಗದಗ: ಡಿ. 11ರಂದು ಬೆಳಗ್ಗೆ 11ಗಂಟೆಗೆ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.