ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

14ರಂದು ಸಭೆ

Lingaraj Badiger
Updated On : 12 Dec 2013, 11:38 am

ನರೇಗಲ್ಲ:  ಸ್ಥಳೀಯ ಪಟ್ಟಣಮಟ್ಟದ ಅಖಂಡ ವೀರಶೈವ ಸಂಘಟನಾ ಸಭೆಯನ್ನು ಡಿ. 14ರ ಸಂಜೆ 6ಕ್ಕೆ ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ಕರೆಯಲಾಗಿದೆ. ಅಧ್ಯಕ್ಷೆತೆಯನ್ನು ಸಿ.ಜಿ. ಹುಡೇದಗಡ್ಡಿ ವಹಿಸಲಿದ್ದು, ಸಭೆಯಲ್ಲಿ ಸಂಘಟನಾ ಸಭೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಕಾರಣ ವೀರಶೈವ ಎಲ್ಲ ಉಪಪಂಗಡಗಳ ಸಮಾಜ ಬಾಂಧವರು ಸಭೆಗೆ ಆಗಮಿಸುವಂತೆ ಸಂಚಾಲಕ ನಿವೃತ್ತ ಪ್ರಾಚಾರ್ಯ ಸಿ.ವಿ. ವಂಕಲಕುಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ವಸ್ತು ಪ್ರದರ್ಶನ
ಗದಗ: 2013-14ನೇ ಸಾಲಿನ ಜಿಲ್ಲಾಮಟ್ಟದ ಸರ್ಕಾರಿ, ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಡಿ. 13ರ ಬೆಳಗ್ಗೆ 9ಕ್ಕೆ ನಗರದ ಹಾತಲಗೇರಿ ನಾಕಾದ ಪಿ.ಎನ್.ಟಿ. ಕ್ವಾಟರ್ಸ್‌ನಲ್ಲಿರುವ ಜಿ.ಪಿ. ಶಿಕ್ಷಣ ಸಂಸ್ಥೆಯ ತರಬೇತಿ ಮಹಾವಿದ್ಯಾಲಯದ ಪ್ರೌಢಶಾಲೆಯಲ್ಲಿ ಜಿಲ್ಲಾ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ತಾಲೂಕಿನಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ತಲಾ 2 ವಿದ್ಯಾರ್ಥಿಗಳು ಹಾಗೂ ಎಲ್ಲ ವೃತ್ತಿ ಶಿಕ್ಷಣ (ಚಿತ್ರ ಕಲೆ ಮತ್ತು ಸಂಗೀತ ಶಿಕ್ಷಕರನ್ನು ಹೊರತುಪಡಿಸಿ) ಶಿಕ್ಷಕರು ಸರಿಯಾದ ಸಮಯಕ್ಕೆ ಕಡ್ಡಾಯವಾಗಿ ಭಾಗವಹಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷೆಗಳು
ಗದಗ: ಕನ್ನಡ ಸಾಹಿತ್ಯ ಪರಿಷತ್ತಿನ 2013-14ನೇ ಸಾಲಿನ ಪ್ರವೇಶ, ಕಾವ್ಯ, ಜಾಣ ಮತ್ತು ರತ್ನ ಪರೀಕ್ಷೆಗಳು ಡಿ. 27, 28 ಮತ್ತು 29ರಂದು ಒಟ್ಟು 3 ದಿನಗಳ ಕಾಲ ರಾಜ್ಯದ 19 ಕೇಂದ್ರಗಳಲ್ಲಿ ನಡೆಯಲಿವೆ. ಪರೀಕ್ಷಾ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗಳಿಗೆ ಅಂಚೆ ಮೂಲಕ ಕಳುಹಿಸಲಾಗಿದೆ. ಡಿ. 15ರ ನಂತರವೂ ಪ್ರವೇಶ ಪತ್ರ ತಲುಪದಿರುವ ಬಗ್ಗೆ ವಿದ್ಯಾರ್ಥಿಗಳು ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18 ಇವರಲ್ಲಿ ವಿಚಾರಿಸಬಹುದು. ಬೇರೆ ಜಿಲ್ಲೆಯವರಿಗೆ ಪ್ರವೇಶ ಪತ್ರ ತಲುಪದಿದ್ದಲ್ಲಿ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬಹುದು. ಪರೀಕ್ಷಾ ಕೇಂದ್ರದ ವಿಳಾಸವನ್ನು ದೂರವಾಣಿ (080-26623584) ಮೂಲಕ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರಗಳ ವಿಳಾಸವನ್ನು ಢಿಢಿಢಿ.್ಞಛಡಛಠಛ.್ಝಟಿ ಮೂಲಕ ಸಹ ಪಡೆದುಕೊಳ್ಳಬಹುದಾಗಿದೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಕಿಲ್ಲಾ, ಒಕ್ಕಲಗೇರಿ, ಕುಲಕರ್ಣಿ ಓಣಿ, ಬಾರಕೇರ ಲೈನ್, ಕಟಗಾರ ಲೈನ್, ಶರಣಬಸವೇಶ್ವರ ಗುಡಿ ಲೈನ್, ಕಲಬುರ್ಗಿ ಲೈನ್, ಭೂಸ್ತ ಲೈನ್, ಕರಸಿದ್ಧಿ ಮಠ ಲೈನ್, ಮಲ್ಲರಾಯನ ಕಟ್ಟಿ ಲೈನ್, ಕಂಗೂರಿ ಓಣಿ, ಕಬಾಡಿ ಲೈನ್, ತೆಂಗಿನಕಾಯಿ ಬಜಾರ್, ರೇವಿಂಗ್‌ಟನ್ ರೋಡ್, ವಿಧ್ಯಾರಣ್ಯ ರೋಡ್, ವಿಜ್ಜು ಕಬಾಡಿ ರೋಡ್, ಅಯ್ಯಪ್ಪಜ್ಜನ ರೋಡ್, ರಾಜಾಜಿ ರೋಡ್, ಜವಳಹಳ್ಳ ಉಳಿದ ಭಾಗ, ಎಸ್.ಎಂ. ಕೃಷ್ಣ ನಗರ ಉಳಿದ ಭಾಗ ಈ ಪ್ರದೇಶಗಳಲ್ಲಿ ಗುರುವಾರ ನೀರು ಪೂರೈಕೆ ಮಾಡಲಾಗುವುದೆಂದು ಪ್ರಕಟಣೆ ತಿಳಿಸಿದೆ.

ಡೊಳ್ಳಿನ ಪದಗಳಲ್ಲಿ ಮಾನವೀಯ ಸಂದೇಶ: ಬಸವಂತಪ್ಪ ತಳವಾರ
ರೋಣ: ಜನಪದ ಮೂಲ ಕಲೆಯಲ್ಲೊಂದಾದ ಡೊಳ್ಳಿನ ಪದಗಳಲ್ಲಿ ಮಾನವೀಯ ಮೌಲ್ಯಗಳ ಸಂದೇಶವಿದೆ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ, ಹುನಗುಂಡಿ ಗ್ರಾಪಂ ಉಪಾಧ್ಯಕ್ಷ ಬಸವಂತಪ್ಪ ತಳವಾರ ಹೇಳಿದರು.  ಅವರು ಈಚೆಗೆ ತಾಲೂಕಿನ ಯಾವಗಲ್ ಗ್ರಾಮದಲ್ಲಿ ದುರ್ಗಾದೇವಿ ಭಕ್ತ ಮಂಡಳಿ ವತಿಯಿಂದ ದುರ್ಗಾದೇವಿ ಕಾರ್ತಿಕೋತ್ಸವ ಅಂಗವಾಗಿ ಜರುಗಿದ ರಾಜ್ಯ ಮಟ್ಟದ ಡೊಳ್ಳಿನ ಪದಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  ಇತ್ತಿಚಿನ ದಿನಗಳಲ್ಲಿ ಡೊಳ್ಳಿನ ಪದಗಳನ್ನು ಕೇಳುವುದು ಅತಿ ವಿರಳವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಅಲ್ಲಲ್ಲಿ ಇಂತಹ ಕಲೆ ಕಾಣಬಹುದಾಗಿದೆ. ಡೊಳ್ಳಿನ ಪದಗಳ ಮಾಯವಾಗುವುದಕ್ಕೆ ಪಾಶ್ಚಿಮಾತ್ಯ ಪ್ರಭಾವ ಮತ್ತು ಆಧುನಿಕತೆಯ ಸ್ಪರ್ಶವೇ ಮುಖ್ಯ ಕಾರಣವಾಗಿದೆ. ಆದ್ದರಿಂದ ಮೂಲ ಜನಪದ ಕಲೆಯಾದ ಡೊಳ್ಳಿನ ಪದಗಳ ಉಳಿವಿಗೆ ಸರ್ಕಾರ ಚಿಂತನೆ ನಡೆಸಬೇಕು. ಆ ದಿಸೆಯಲ್ಲಿ ಸಂಘ, ಸಂಸ್ಥೆಗಳು ಮತ್ತು ಯುವ ಜನತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದರು.  ಜಿಪಂ ಸದಸ್ಯೆ ಶಾರದಾ ಹಿರೇಗೌಡ್ರ ಮುಂತಾದವರು ಮಾತನಾಡಿದರು. ಸಾನ್ನಿಧ್ಯವನ್ನು ಸಿದ್ಧಯ್ಯಸ್ವಾಮಿ ಹಿರೇಮಠ ವಹಿಸಿದ್ದರು. ಈರಪ್ಪ ತಾಳಿ, ಎಸ್.ಎಂ. ಪಾಟೀಲ, ಎಸ್.ಆರ್. ಕಮತಿ, ಐ.ಎಂ. ಗಾಣಿಗೇರ, ಪುರಸಭೆ ಸದಸ್ಯ ಮಂಜುನಾಥ ಹಾಳಕೇರಿ, ಶಂಕರಗೌಡ ಪಾಟೀಲ, ಮೌನೇಶ ಹಾದಿಮನಿ, ರುದ್ರಗೌಡ ಮುಲ್ಕಿಪಾಟೀಲ, ಪರಪ್ಪ ಗಾಳಿ, ಪರಶುರಾಮ ಚಲವಾದಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ದೇವೀಂದ್ರಪ್ಪ ಕೊಳ್ಳಪ್ಪನವರ ಸ್ವಾಗತಿಸಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement