ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಂಧತ್ವ ನಿವಾರಣೆಗೆ ಪಣ ತೊಡಿ

Lingaraj Badiger
Updated On : 12 Dec 2013, 11:29 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಡಿ. 11
ಮನುಷ್ಯನ ಅಂಗಾಂಗಳಲ್ಲಿ ಕಣ್ಣು ಅತ್ಯಂತ ಶ್ರೇಷ್ಠ. ಮಾನವೀಯ ಮೌಲ್ಯಗಳ ಪ್ರತಿಬಿಂಬವೆನಿಸಿರುವ ನೇತ್ರ ರಕ್ಷಣೆ ಹಾಗೂ ನೇತ್ರದಾನದಂತಹ ಪುಣ್ಯ ಕಾರ್ಯಕ್ಕೆ ಪ್ರತಿಯೊಬ್ಬರೂ ಮುಂದಾಗಿ ಅಂಧತ್ವ ನಿವಾರಣೆಗೆ ಪಣ ತೊಡಿ ಎಂದು ಜಿಲ್ಲಾ ಆಯುಷ್ ಇಲಾಖೆ ನೋಡೆಲ್ ಅಧಿಕಾರಿ ಡಾ. ಆರ್.ವಿ. ಹಿರೇಮಠ ಹೇಳಿದರು.
ಸಮೀಪದ ರಾಜೂರ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಲ್ಲಿ ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮತ್ತು ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಪ್ರಾಯೋಜಕತ್ವದಲ್ಲಿ ಈಚೆಗೆ ಆಯೋಜಿಸಲಾಗಿದ್ದ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಆಹಾರ ಪದ್ಧತಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸತ್ವಯುತ ಆಹಾರ ಸೇವಿಸದೆ ಇರುವುದರಿಂದ ರಕ್ತಹೀನತೆ ಉಂಟಾಗಿ, ರೋಗಾಣುಗಳು ದೇಹ ಪ್ರವೇಶಿಸುತ್ತವೆ.
ಪರಿಣಾಮ ಅಂಧತ್ವದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಿ, ಆರೋಗ್ಯ ರಣೆಗೆ ಒತ್ತು ನೀಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ಸರ್ಕಾರ ಜನರ ಆರೋಗ್ಯ ರಕ್ಷಣೆಗೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಸಾರ್ವಜನಿಕರು ಯೋಜನೆಯ ಲಾಭ ಪಡೆದು ಉತ್ತಮ ಆರೋಗ್ಯ ಹೊಂದಿ ಸರ್ಕಾರದ ಯೋಜನೆ ಸಾರ್ಥಕಗೊಳಿಸಿ ಎಂದರು.
ಹುಬ್ಬಳ್ಳಿ ಡಾ. ಎಂ.ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ವೈದ್ಯ ಡಾ. ಡಿ.ಕೆ. ಕುಲಕರ್ಣಿ ನೇತ್ರದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಶಿಬಿರದಲ್ಲಿ ನೂರಾರು ರೋಗಿಗಳಿಗೆ ತಪಾಸಣೆ ನಡೆಸಿದರು.
30ಕ್ಕೂ ಅಧಿಕ ರೋಗಿಗಳ ಕಣ್ಣಿನ ಶಸ್ತ್ರಚಿಕಿತ್ಸೆಗೆ ಹುಬ್ಬಳ್ಳಿಗೆ ಕಳಿಸಲಾಯಿತು. ಜತೆಗೆ ಕೆಲ ರೋಗಿಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು.
ಡಾ. ರಜನಿ, ಎಸ್.ಬಿ.ಪಾಟೀಲ, ಶರಣು ಯಲಬುರ್ಗಿ, ಪಿಡಿಒ ಎಲ್.ಎಲ್. ಮಾನೆ, ಶಿವಕುಮಾರ ಜಾಧವ, ಪರಶುರಾಮ ಚಿಲಝರಿ, ಲಿಂಗರಾಜ ಲೆಕ್ಕದ, ಡಾ. ಎಂ.ಎ. ಹಾದಿಮನಿ, ರೇಣುಕಾ ನಾಗರಾಳ, ಡಾ. ಮಾರುತಿ ದೊಡ್ಡಮನಿ, ಡಾ. ಎಂ.ಎ. ಹಾದಿಮನಿ, ಸಂತೋಷ ಹಳ್ಳದ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement