ಹಲವು ಕ್ಷೇತ್ರಗಳಲ್ಲಿ ಮಹಿಳೆ ಸಾಧನೆ: ಬಿ.ಎನ್. ತಾರಾ
ಗದಗ: ಮಹಿಳೆ ಇಂದು ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾಳೆಂದು ಬಿ.ಎನ್. ತಾರಾ ಅಭಿಪ್ರಾಯಪಟ್ಟರು. ಅವರು ಈಚೆಗೆ ನಗರದ ಝಾಕೀರ್‌ಹುಸೇನ ಕಾಲೋನಿಯ ಶಾದಿ ಮಹಲ್‌ದಲ್ಲಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಕರ್ನಾಟಕ, ಗದಗ ಜಿಲ್ಲಾ ಸಂಘಟನೆ ಏರ್ಪಡಿಸಿದ್ದ ಘನತೆ ನನ್ನ ಹಕ್ಕು-ನನ್ನ ಹೊಣೆಗಾರಿಕೆ ಮಹಿಳೆಯರ ಜಿಲ್ಲಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಹಿಂದಿನ ಮತ್ತು ಇಂದಿನ ಮಹಿಳೆಯರ ಸ್ಥಿತಿಗತಿಯನ್ನು ವಿವರಿಸಿದರು. ಲಕ್ಕುಂಡಿಯ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಶಿಕ್ಷಕಿ ಶಾರದಾ ಬಾಣದ, ಶಿಕ್ಷಕಿ ಚೈತ್ರಾ ಧರ್ಮಾಯತ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ರಾಜ್ಯ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್‌ದ ಸಲಹಾ ಸಮಿತಿಯ ಸದಸ್ಯೆ ತಯ್ಯಬಾ ಕೌಸರ್ ಮಾತನಾಡಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಮಹಿಳೆಗೆ ಮಹತ್ತರ ಜವಾಬ್ದಾರಿ ಇದೆ. ಇಂದು ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಮಹಿಳೆಯರು ತಿಳಿವಳಿಕೆ ಹೊಂದಬೇಕಿದೆ ಎಂದರು. ಸೂಫಿಯಾ ಮುಲ್ಲಾ, ತಹೀರಾಬೇಗಂ ಶಿರಹಟ್ಟಿ, ಪರ್ವಿನ್‌ಬಾನು ನದ್ದಿಮುಲ್ಲಾ, ಇಮಾಮಬಿ ಶೇಖ್, ಆಯಿಶಾ ಶಿರಹಟ್ಟಿ ಉಪಸ್ಥಿತರಿದ್ದರು. ಮುನವರ್‌ಸುಲ್ತಾನ್ ಶಿರಹಟ್ಟಿ ಕುರಾಣ ಪಠಿಸಿದರು. ಬಿಲ್‌ಕಿಶ್ ಧಾರವಾಡ ಸ್ವಾಗತಿಸಿದರು. ಬಿಸ್ಮಿಲ್ಲಾ ಮುಲ್ಲಾ ನಿರೂಪಿಸಿದರು. ಸಮೀನಾ ತರಫದಾರ ವಂದಿಸಿದರು.