ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಕನಕ ಜಯಂತಿ

Lingaraj Badiger
Updated On : 13 Dec 2013, 10:50 am

ನರಗುಂದ: ತಾಲೂಕಿನ ಕೊಣ್ಣೂರು ಗ್ರಾಮದ ಗ್ರಾಪಂ ರಂಗಮಂದಿರದಲ್ಲಿ ತಾಲೂಕು ಕನಕ ಯುವ ಸೇನೆಯ ಆಶ್ರಯದಲ್ಲಿ ದಾಸಶ್ರೇಷ್ಠ ಕನಕದಾಸರ 526ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಡಿ. 13 ರ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಮನಸೂರ-ಧಾರವಾಡ ಮಹಾಮಠದ ಬಸವರಾಜ ದೇವರ, ಕೊಣ್ಣೂರ ವಿರಕ್ತಮಠದ ಡಾ. ಶಿವಕುಮಾರ ಶ್ರೀಗಳು, ಕೆಂಜೋಡಪ್ಪ ಹಿರೇಹೊಳಿ, ಬಸಪ್ಪ ನರಗುಂದ ಮುಂತಾದವರು ಭಾಗವಹಿಸುವರು.
ಹೋರಾಟಗಾರರು ರೈತರ ದಾರಿ ತಪ್ಪಿಸುತ್ತಿದ್ದಾರೆ
ನರಗುಂದ: ಮಲಪ್ರಭಾ ಜಲಾಶಯ ಕಟ್ಟಲು 33 ಹಳ್ಳಿಗಳನ್ನು ಸ್ಥಳಾಂತರಿಸಿ ಜಲಾಶಯ ಕಟ್ಟಲಾಗಿದೆ. ಆದರೆ ಈ ಜಲಾಶಯ ಮಳೆಗಾಲದಲ್ಲಿ ಭರ್ತಿಯಾಗಿದ್ದು, ಈ ಭಾಗದ ಕೆಲವು ಸಂಘಟನೆಗಳು ಕಳಸಾ ಬಂಡೂರಿ ನಾಲಾಗಳನ್ನು ಕೂಡಿಸಿದರೆ 7.56 ಟಿಎಂಸಿ ನೀರು ಸಿಗುತ್ತದೆ ಎಂದು ಈ ಭಾಗದ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ರೈತ ಕರ್ನಾಟಕ ಸೇನೆ ಅಧ್ಯಕ್ಷ ವೀರೇಶ ಸೋಬರದಮಠ ಆರೋಪಿಸಿದರು.  ಅವರು ಬುಧವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಳೆ ಕೊರತೆಯಿಂದ ಮಲಪ್ರಭಾ ಜಲಾಶಯಕ್ಕೆ ಸಮರ್ಪಕ ನೀರು ಬರದೇ ಇರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಭಾಗದ ಕೆಲವು ರಾಜಕಾರಣಿಗಳು ಮತ್ತು ಹೋರಾಟಗಾರರು ಕಳಸಾ ಬಂಡೂರಿ ನಾಲಾ ಜೋಡಣೆ ಮಾಡಿದರೆ 7.56 ಟಿಎಂಸಿ ನೀರು ಬರುತ್ತದೆಂದು ಹೇಳಿ ರೈತ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಹಳ್ಳಗಳಿಂದ ಜಲಾಶಯಕ್ಕೆ ಕೇವಲ 1.56 ಟಿಎಂಸಿ ನೀರು ಮಾತ್ರ ಸಿಗಲಿದ್ದು, ಕಾರಣ ಇದೇ ಡಿ. 20ರಂದು ಮಲಪ್ರಭಾ ಜಲಾಶಯದ ಭಾಗಗಳಿಗೆ ಯಾವ ಮೂಲದಿಂದ ನೀರು ಸಂಗ್ರಹ ಮಾಡಲು ಸಾಧ್ಯವೆಂದು ಸಮೀಕ್ಷೆ ನಡೆಸಲು ನ್ಯಾಯಧೀಕರಣದ ನ್ಯಾಯಧೀಶರು ಬರುತ್ತಿದ್ದು, ಅದಕ್ಕೆ ನಾವು ರೈತ ಕರ್ನಾಟಕ ಸೇನೆ ವತಿಯಿಂದ ಬೆಳಗಾವಿ ಜಿಲ್ಲೆಯ ಸವದತ್ತಿಯ ಮಿನಿ ವಿಧಾನಸೌಧದಲ್ಲಿ ಚಿಂತನೆ ಸಭೆ ನಡೆಸಿ ಸರ್ಕಾರದ ಮೇಲೆ ಒತ್ತಡ ತಂದು,ನ್ಯಾಯಧೀಶರ ಗಮನ ಸೆಳೆಯವ ಪ್ರಯತ್ನ ಮಾಡುತ್ತೇವೆ ಎಂದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕ್ರಪ್ಪ ಅಂಬಿಲಿ, ತಾಲೂಕು ಅಧ್ಯಕ್ಷ ಶರಣಪ್ಪ ಪಾಟೀಲ, ಸಿ.ಎಸ್. ನವಲಗುಂದ ಮುಂತಾದವರು ಉಪಸ್ಥಿತರಿದ್ದರು.
ಮುಡಿಯಮ್ಮ ನಿಧನ
ಗದಗ: ತಾಲೂಕಿನ ಕೋಟುಮಚಗಿ ಗ್ರಾಮದ ಮುಡಿಯಮ್ಮ ಮೈಲಾರಪ್ಪ ಬೂನಕೊಪ್ಪ (94) ಗುರುವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗ ಇದ್ದಾರೆ.
ಸಂತಾಪ: ಇವರ ನಿಧನಕ್ಕೆ ಶಾಸಕ ಜಿ.ಎಸ್. ಪಾಟೀಲ, ಗದಗ ಎಪಿಎಂಸಿ ಸದಸ್ಯ ರಾಮಣ್ಣ ಶಿಂಗ್ಟಾಲಕೇರಿ, ಗ್ರಾಪಂ ಅಧ್ಯಕ್ಷೆ ಸುಮಂಗಲಾ ಜಗ್ಗಲ ಹಾಗೂ ಗ್ರಾಪಂ ಸದಸ್ಯರು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement