ತರಬೇತಿ ಸದುಪಯೋಗ ಪಡೆಯಿರಿ
ನರಗುಂದ: ಮಹಿಳೆಯರು ವೃತಿ ಕೌಶಲ್ಯದ ತರಬೇತಿ ಪಡೆದುಕೊಳ್ಳುವ ಮೂಲಕ ಯೋಜನೆಯ ಸದುಪಯೋಗಕ್ಕೆ ಮುಂದಾಗಬೇಕು ಎಂದು ತಾಲೂಕು ಸಾಕ್ಷರ ಭಾರತ ಕಾರ್ಯಕ್ರಮದ ಸಂಯೋಜಕ ಎಸ್.ಜಿ.ಪೂಜಾರ ಹೇಳಿದರು. ಅವರು ಈಚೆಗೆ ತಾಲೂಕಿನ ಕಲಕೇರಿ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಸಾಕ್ಷರ ಭಾರತ ಹಾಗೂ ಮುಕ್ತಾ ಫೌಂಡೇಶನ್‌ನ ಆಶ್ರಯದಲ್ಲಿ ವೃತಿ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಕ್ಷರ ಭಾರತ ಕಾರ್ಯಕ್ರಮದಲ್ಲಿ ನವಸಾಕ್ಷರಸ್ಥರಿಗೆ 2 ತಿಂಗಳ ಹೊಲಿಗೆ (ಕಸೂತಿ) ತರಬೇತಿಯನ್ನು ನೀಡಲಾಗುತ್ತದೆ. ಇದರ ಸದುಪಯೋಗವನ್ನು ಗ್ರಾಮೀಣ ಭಾಗದ ಮಹಿಳೆಯರು ಪಡೆಯಬೇಕು ಎಂದರು. ಮುಕ್ತಾ ಫೌಂಡೇಶನ್ ಅಧ್ಯಕ್ಷ ಎಫ್.ಬಿ. ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಚನ್ನವೀರಯ್ಯ ಹಿರೇಮಠ ಉದ್ಘಾಟಿಸಿದರು. ಎಂ.ಎಸ್.ನಾಗಲೋಟಮಠ ಸ್ವಾಗತಿಸಿದರು. ದೇವಕ್ಕ ಮೇಟಿ ನಿರೂಪಿಸಿದರು. ರೇಖಾ ಅಣ್ಣಿಗೇರಿಮಠ ವಂದಿಸಿದರು.