ನಾಳೆ ನಿವೃತ್ತ ನೌಕರರ ಸಭೆ
ಗದಗ: ಗದಗ ಜಿಲ್ಲಾ ನಿವೃತ್ತ ಪೌರಸೇವಾ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಯನ್ನು ಡಿ. 14ರ ಬೆಳಗ್ಗೆ 11ಕ್ಕೆ ನಗರಸಭೆಯ ಆವರಣದಲ್ಲಿರುವ ಅಂಬೇಡ್ಕರ್ ಉದ್ಯಾನವನದಲ್ಲಿ ಕರೆಯಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಬಿ.ಎನ್. ಶಿಂಗಾಡಿ ವಹಿಸುವರು. ಸಭೆಯಲ್ಲಿ ಪೌರಸೇವಾ ಪಿಂಚಣಿದಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಕಾರಣ ಜಿಲ್ಲೆಯಲ್ಲಿನ ಎಲ್ಲ ನಗರ, ಪಟ್ಟಣ, ಪುರಸಭೆ, ಪಪಂಗಳ ವ್ಯಾಪ್ತಿಯಲ್ಲಿನ ಕಾರ್ಯಕಾರಿ ಸಮಿತಿಯ ಸದಸ್ಯರು, ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ಸಭೆಗೆ ತಪ್ಪದೇ ಹಾಜರಾಗಬೇಕೆಂದು ಕಾರ್ಯದರ್ಶಿ ಎಂ.ವಿ. ಹೂಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.