ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ

Lingaraj Badiger
Updated On : 13 Dec 2013, 10:56 am

ಗಜೇಂದ್ರಗಡ: ವಿದ್ಯಾರ್ಥಿಗಳು ಏಕಾಗ್ರತೆ, ಕ್ರಿಯಾಶೀಲತೆಯಿಂದ ವಿದ್ಯೆ ಸಂಪಾದಿಸಿ ಸಮಾಜದ ಕೀರ್ತಿಗೆ ಪಾತ್ರರಾಗಬೇಕು ಎಂದು ಮುಖ್ಯೋಪಾದ್ಯಾಯ ಎಲ್.ಕೆ. ರಾಠೋಡ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿಯ ಕೇಂದ್ರ ಶಾಲೆ ನಂ. 1ರಲ್ಲಿ ಈಚೆಗೆ ನಡೆದ 2012-13ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸ್ಥಳೀಯ ಶಿಕ್ಷಣ ಪ್ರೇಮಿ ಚಂದ್ರಶೇಖರಯ್ಯ ಚಿನ್ನಯ್ಯನಮಠ ಅವರು ನೀಡಿದ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.
ಚಂದ್ರಶೇಖರಯ್ಯ ಚಿನ್ನಯ್ಯನಮಠ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಸದ್ವಿನಿಯೋಗ ಪಡಿಸಿಕೊಂಡು ಸನ್ನಢತೆಯಿಂದ ವಿದ್ಯೆ ಪಡೆದು ದೇಶದ ಹೆಮ್ಮೆಯ ನಾಗರಿಕರಾಗಿ ಬಾಳಿ ಎಂದರು. ಇದೇ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ಎ.ಎಸ್. ಕವಡಿಮಟ್ಟಿ, ಎಸ್.ಟಿ.ಪುಜಾರ, ಆರ್.ವಿ. ನಿರಂಜನ, ಎಚ್.ವಿ. ಕಂಬಳಿ, ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement