ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಪ್ರಾಪ್ತೆ 2 ಮಕ್ಕಳಿಗೆ ಅಪ್ಪ ಯಾರು?

Mainashree
Updated On : 14 Dec 2013, 10:19 am

ಕನ್ನಡಪ್ರಭ ವಾರ್ತೆ, ಗದಗ, ಡಿ. 13
ಅವಿವಾಹಿತ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳು ಮಗುವನ್ನು ಹೆರುವ ಮೂಲಕ ಪಟ್ಟಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮಗುವಿನ ಜನ್ಮಕ್ಕೆ ಕಾರಣ ಯಾರು? ಎಂಬುದು ಯಕ್ಷಪ್ರಶ್ನೆಯಾಗಿ ಉದ್ಭವಿಸಿರುವ ಘಟನೆ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಶುಕ್ರವಾರ ವರದಿಯಾಗಿದೆ.
ಪಟ್ಟಣದ ನೀರಾವರಿ ಇಲಾಖೆಯ ಕ್ವಾಟರ್ಸ್‌ನಲ್ಲಿ ನೌಕರ ಲಕ್ಷ್ಮಣ ಬೇಲಿಫ್ ಹಾಗೂ ಕಸ್ತೂರಿ ದಂಪತಿಯ ನಿರ್ಲಕ್ಷ್ಯಕ್ಕೊಳಗಾದ 15 ದಿನದ ಹಸುಗೂಸು ಸೇರಿದಂತೆ 6 ಮಕ್ಕಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅಚ್ಚರಿ ವಿಷಯ ಏನೆಂದರೆ ಹಸುಗೂಸು ಹೆತ್ತ ಬಾಲಕಿಗೆ ಮದುವೆಯೇ ಆಗಿಲ್ಲ. ಆದ್ರೂ 2 ಮಕ್ಕಳ ತಾಯಿಯಾಗಿದ್ದಾಳೆ. ಈ ಬಾಲಕಿ ತಾಯಿಯಾಗಲು ಕಾರಣ ಯಾರೂ ಎನ್ನುವ ಗೊಂದಲ ಪೊಲೀಸರು ಸೇರಿದಂತೆ ಸಾರ್ವಜನಿಕರನ್ನು ಕಾಡುತ್ತಿದೆ. ಕಾರಣ ಬಾಲಕಿಯ ತಂದೆ ಹಾಗೂ ಸಹೋದರ ವರ್ತನೆ ಮತ್ತು ಹೇಳಿಕೆಗಳು ತದ್ವಿರುದ್ಧವಾಗಿದ್ದು, ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ತಂದೆ ಮತ್ತು ಸಹೋದರ ಮುಗ್ಧ ಬಾಲಕಿಯನ್ನು ದುರ್ಬಳಕೆ ಮಾಡಿಕೊಂಡ ಮಾತು ಪಟ್ಟಣದಲ್ಲಿ ಕೇಳಿಬರುತ್ತಿದ್ದು, ಈ ಹಿಂದೆಯೂ ಈ ಬಾಲಕಿಯು ಒಂದು ಮಗುವನ್ನು ಹೆತ್ತಿದ್ದು, ಆ ಮಗುವನ್ನು ಮಾರಾಟ ಮಾಡಲಾಗಿದೆ ಎಂದು ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಮಕ್ಕಳ ಮಾರಾಟ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಈಗಾಗಲೇ ಅ ಅಪ್ರಾಪ್ತೆ ಹಾಗೂ ವಶಪಡಿಸಿಕೊಳ್ಳಲಾದ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ವಶಕ್ಕೆ ಒಪ್ಪಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಕ್ಕಳ ರಕ್ಷಣಾ ಸಮಿತಿ ಸದಸ್ಯರುಗಳು ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಸಮಗ್ರ ತನಿಖೆಯ ನಂತರ ಸಂಪೂರ್ಣ ವಿಷಯ ಹೊರಬರಲಿದೆ.
ಎಸ್ಪಿ ಡಾ. ಶರಣಪ್ಪ ಎಸ್.ಡಿ., ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿ ಭಾರತಿ ಸೇರಿದಂತೆ ಜಿಲ್ಲೆಯ ಈ ಹಿರಿಯ ಅಧಿಕಾರಿಗಳಿಗೆ ಈ ಪ್ರಕರಣ ದೊಡ್ಡ ತಲೆನೋವಾಗಿದ್ದು, ಮಗುವಿನ ಡಿ.ಎನ್.ಎ. ಪರೀಕ್ಷೆಯ ನಂತರವಷ್ಟೇ ಈ ವಿಷಯ ಖಚಿತವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement