ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕನ್ನಡ ಸಾಹಿತ್ಯಕ್ಕೆ ಶಿಕ್ಷಕರ ಕೊಡುಗೆ ಅಪಾರ

Lingaraj Badiger
Updated On : 16 Dec 2013, 11:27 am

ಗದಗ: ಕನ್ನಡ ಸಾಹಿತ್ಯ ಪರಂಪರೆಗೆ ಶಿಕ್ಷಕರ ಕೊಡುಗೆ ಅಪಾರವಾಗಿದೆ. ಕಥೆ, ಕವನ, ಕಾದಂಬರಿ, ನಾಟಕ, ಸಂಶೋಧನೆ, ಅಧ್ಯಾಪನೆಯಲ್ಲಿ ತೊಡಗಿ, ಜನರಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ತಮ್ಮದೇಯಾದ ಅನುಪಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಎಂದು ಲೋಯಲಾ ಹೈಸ್ಕೂಲಿನ ನಿವೃತ್ತ ಶಿಕ್ಷಕ ಜಿ.ಪಿ. ಕಟ್ಟಿಮನಿ ಹೇಳಿದರು.  ಅವರು ತಾಪಂ ಆವರಣದಲ್ಲಿರುವ ಜಿಲ್ಲಾ ಕಸಾಪ ಕಾರ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕ ವೃತ್ತಿಯಲ್ಲಿರುವವರು ಸಾಹಿತ್ಯ ಕ್ಷೇತ್ರಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿದರು. ಪ್ರಾ. ಕೆ.ಎಚ್. ಬೇಲೂರ, ಅ.ದ. ಕಟ್ಟಿಮನಿ, ಕೊತ್ತಲ ಮಹಾದೇವಪ್ಪ, ಬಿ.ಎಸ್. ಹಿಂಡಿ, ಎಂ.ಪಿ. ರಮೇಶ, ಎ.ಎಸ್. ಮಕಾನದಾರ, ಪಟದಯ್ಯ ಮೂಲಿಮಠ, ಎಚ್.ಟಿ. ಸಂಜೀವಸ್ವಾಮಿ, ರಾಜಶೇಖರಯ್ಯ ಕಾಲವಾಡಮಠ, ಬಸವರಾಜ ವಾರಿ, ಶಂಕರ ಗಾಣಿಗೇರ, ವಾಸುದೇವ ಹೂಲಿ, ವಿ.ಎನ್. ಬೇಂದ್ರೆ, ಬಸವರಾಜ ಸಂಶಿ, ಧರ್ಮೇಂದ್ರ ಇಟಗಿ, ರಮೇಶ ಸಜಗಾರ, ಮಲ್ಲಿಕಾರ್ಜುನ ಪೂಜಾರ, ರೇಣುಕಾ ಬಣಕಾರ, ಲಲಿತಾ ಬೇಲೂರ, ರೇಖಾ ಟಿಕಾರೆ, ಕೆ.ಡಿ. ತಳವಾರ ಮುಂತಾದವರು ಪಾಲ್ಗೊಂಡಿದ್ದರು. ವಾಸು ಟಿಕಾನದಾರ ಪ್ರಾರ್ಥಿಸಿದರು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಸಂಗಮೇಶ ತಮ್ಮನಗೌಡ್ರ ಸ್ವಾಗತಿಸಿದರು. ಶರಣು ಗೋಗೇರಿ ನಿರೂಪಿಸಿದರು. ಮಲ್ಲೇಶ ಡಿ.ಎಚ್. ವಂದಿಸಿದರು.

ಹುಚ್ಚುನಾಯಿ ಕಡಿತ: 10ಕ್ಕೂ ಹೆಚ್ಚು ಜನರಿಗೆ ಗಾಯ
ಗದಗ:  ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಹುಚ್ಚುನಾಯಿಯೊಂದು ಸಾರ್ವಜನಿಕರ ಮೇಲೆ ಏಕಾಏಕಿ ಮನಬಂದಂತೆ ದಾಳಿ ಮಾಡಿದ್ದು, 10ಕ್ಕೂ ಹೆಚ್ಚು ಜನರಿಗೆ ಗಾಯಗಳಾದ ಘಟನೆ ಜರುಗಿದೆ. ಗ್ರಾಮದ ಮುಖ್ಯ ರಸ್ತೆಯಲ್ಲಿಯೇ ಈ ಘಟನೆ ನಡೆದಿದ್ದು. ಗಾಯಗೊಂಡವರಲ್ಲಿ 3 ಜನರಿಗೆ ಅತಿಯಾದ ಗಾಯಗಳಾಗಿದ್ದು, ಅವರೆಲ್ಲ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರಿಗೂ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿ ಹುಚ್ಚು ನಾಯಿ ಕುರಿತು ಭಯದ ವಾತಾವರಣ ನಿರ್ಮಾಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement