ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೋಮುಗಳ ಮಧ್ಯೆ ಘರ್ಷಣೆ: 10ಕ್ಕೂ ಹೆಚ್ಚು ಜನರಿಗೆ ಗಾಯ

Vishwanath S
Updated On : 16 Dec 2013, 12:36 pm

ಮುಂಡರಗಿ: ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಕ್ಷುಲ್ಲಕ ಕಾರಣದಿಂದ ಎರಡು ಕೋಮುಗಳ ನಡುವೆ ನಡೆದ ಜಗಳವು ತೀವ್ರ ಸ್ವರೂಪ ತಾಳಿ, 10ಕ್ಕೂ ಹೆಚ್ಚು ಜನರು ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ಕೆಲವರನ್ನು ಗದಗ ಆಸ್ಪತ್ರೆಗೆ ಸೇರಿಸಲಾಗಿದೆ. ಕೆಲವರು ಮುಂಡರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುರುಬ ಸಮಾಜಕ್ಕೆ ಸಂಬಂಧಪಟ್ಟ ಸಹಕಾರ ಸಂಘ ಸಭೆಯನ್ನು ಭಾನುವಾರ ಗ್ರಾಮದ ಬೀರೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ಗ್ರಾಮದಲ್ಲಿ ಯಾವುದೇ ತಂಟೆ, ತಕರಾರು ಇದ್ದರೆ ಎಲ್ಲ ಸಮಾಜದ ಹಿರಿಯರನ್ನೂ ಅದರಲ್ಲಿಯೂ ದಲಿತ ಹಿರಿಯರನ್ನು ಕರೆಯಲಾಗುತ್ತದೆ. ಸಂಘದ ಫಲಾನುಭವಿಗಳಿಗೆ ವಿತರಿಸುವ ಹಣಕಾಸಿಗೆ ಸಂಬಂಧಪಟ್ಟ ಸಭೆಗೆ ಕುರುಬ ಸಮಾಜದವರೂ ದಲಿತ ಹಿರಿಯರನ್ನು ಕರೆಯಿಸಿದ್ದರು ಎನ್ನಲಾಗಿದ್ದು, ಆದರೆ ಸಭೆ ನಡೆದಾಗ ಕೆಲವು ಕುರುಬ ಸಮಾಜದವರು ದಲಿತರನ್ನು ಉದ್ದೇಶಿಸಿ ದೇವಸ್ಥಾನಕ್ಕೆ ನಿಮ್ಮನ್ನು ಸಭೆಗೆ ಕರೆದವರ್ಯಾರು? ಇಲ್ಲಿಗ್ಯಾಕೆ ಬಂದೀರಿ ಎಂದು ನಿಂದಿಸಿ, ಕಲ್ಲು ಮತ್ತು ಬಡಿಗೆಗಳಿಂದ ದಲಿತರನ್ನು ಹೊಡೆದಿದ್ದಾರೆ.ಪರಸ್ಪರ ಘರ್ಷಣೆಯಿಂದ ಹಲವರು ಗಾಯಗೊಂಡಿದ್ದಾರೆ. ಅಲ್ಲದೆ ಕಲ್ಲು ತೂರಾಟದಲ್ಲಿ ಕೆಲವು ಮಹಿಳೆಯರೂ ಗಾಯಗೊಂಡಿದ್ದಾರೆ. ಒಂದೇ ಸಮುದಾಯದ ಒಳಜಗಳದಿಂದ ಅಮಾಯಕರಾದ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ. ಸಭೆ ಕರೆದವರೂ ಅವರೇ ಆದರೂ ನಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ದಲಿತರು ಆರೋಪಿಸಿದ್ದಾರೆ. ಪೊಲೀಸರು ಆಗಮಿಸಿ ಗಾಯಗೊಂಡವರನ್ನು ತಕ್ಷಣ ಮುಂಡರಗಿ ಮತ್ತು ಗದಗ ಆಸ್ಪತ್ರೆಗೆ ಸೇರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement