ನೊಂದವರ ಧ್ವನಿ
ಗದಗ: 'ಕನ್ನಡಪ್ರಭ' ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಲಂಚ ಪ್ರಕರಣ ಬಗ್ಗೆ ರಾಜ್ಯದ ಜನರು ಹಾಗೂ ಸರ್ಕಾರದ ಕಣ್ಣು ತೆರೆಸುವ ನಿಟ್ಟಿನಲ್ಲಿ ಮುಖ್ಯ ಕೊಂಡಿಯಾಗಿ ಕೆಲಸ ಮಾಡಿದೆ, ಇದೊಂದು ಐತಿಹಾಸಿಕ ಮೈಲುಗಲ್ಲಿನ ಕೆಲಸವಾಗಿದೆ. ನೊಂದವರ ಧ್ವನಿಯಾಗುವ ನಿಟ್ಟಿನಲ್ಲಿ ಎರಡು ದಿನಗಳಿಂದ ಪತ್ರಿಕೆ ಉತ್ತಮ ಕೆಲಸವನ್ನು ಮಾಡುವ ಮೂಲಕ ಕಾರ್ಮಿಕರ ಧ್ವನಿಯಾಗಿ ರೂಪಗೊಂಡಿದೆ.