ತರಬೇತಿ ಕಾರ್ಯಕ್ರಮ ಉದ್ಘಾಟನೆ
ಗದಗ: ಸ್ಥಳೀಯ ಎಕ್ಸ್ಲೆಂಟ್ ಕೋಚಿಂಗ್ ಸೆಂಟರ್ನಲ್ಲಿ ಎಕ್ಸಲೆಂಟ್ ಕೋಚಿಂಗ್ ಸೆಂಟರ್ ಮತ್ತು ದೃಷ್ಟಿ ಫೌಂಡೇಶನ್ ಇವರ ಸಹಯೋಗದಲ್ಲಿ ನಡೆದ ಉಚಿತ ಸ್ಪೋಕನ್ ಇಂಗ್ಲೀಷ್ ಹಾಗೂ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಉದ್ಘಾಟಕರಾಗಿ ಆಗಮಿಸಿದ ವಕೀಲ ರಮೇಶ ಬದ್ನೂರ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಇಂಗ್ಲೀಷ್ ಕಲಿಕೆ ಅವಶ್ಯಕವಾಗಿದ್ದು ಕನ್ನಡ ಭಾಷೆಯನ್ನು ಗೌರವಿಸಿ ಇಂಗ್ಲೀಷನ್ನು ಪ್ರೀತಿಸಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸಲೆಂಟ್ ಕೋಚಿಂಗ್ ಸೆಂಟರ್ನ ಅಧ್ಯಕ್ಷ ಕಲ್ಮೇಶ ವಡ್ಡಿನ ವಹಿಸಿದ್ದರು. ಅತಿಥಿಗಳಾಗಿ ಟಿ.ಎಂ. ದೇವರಮನಿ, ಇಂಗ್ಲೀಷ್ ಉಪನ್ಯಾಸಕ ಎ.ಎ. ವೈದ್ಯ, ಎಂ.ಎಸ್. ಬಿಂಗಿ, ಅಶೋಕ ಗಡಾದ, ಕೆ.ವಿ. ಹೂಗಾರ, ಹುಚ್ಚನ್ನವರ, ಅಂಗಡಿ, ಪ್ರಸಾದ ಬಟ್ಟ ಉಪಸ್ಥಿತರಿದ್ದರು. ಗವಿಸಿದ್ಧಯ್ಯ ಹಳ್ಳಿಕೇರಿಮಠ ಪ್ರಾರ್ಥಿಸಿದರು. ಅಶೋಕ ಗಡಾದ ನಿರೂಪಿಸಿದರು. ಮಹೇಶ ವಡ್ಡಿನ ವಂದಿಸಿದರು.