ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿವೇಕಾನಂದರ ಕನಸು ನನಸು ಮಾಡಿ

Lingaraj Badiger
Updated On : 17 Dec 2013, 12:08 pm

ಗಜೇಂದ್ರಗಡ: ಸ್ವಾಮಿ ವಿವೇಕಾನಂದರು ಕಂಡ ಭವ್ಯ ಭಾರತ ಕನಸು ನನಸಾಗಿಸುವ ಮಹತ್ತರ ಜವಾಬ್ದಾರಿ ಯುವಕರ ಮೇಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಅಧ್ಯಕ್ಷ ಬಾಬಣಸಾ ರಾಜೊಳ್ಳಿ ಹೇಳಿದರು. ಈಚೆಗೆ ಜಗದಾಂಬ ಸಮುದಾಯ ಭವನದಲ್ಲಿ ಎಸ್‌ಎಸ್‌ಕೆ ಸಮಾಜ ಪಂಚ ಟ್ರಸ್ಟ್ ಕಮಿಟಿ ವತಿಯಿಂದ ನಡೆದ ಸ್ವಾಮಿ ವಿವೇಕಾನಂದರ 150 ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಮನೆ ಮನೆಗೆ ಸ್ವಾಮಿ ವಿವೇಕಾನಂದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪುಷ್ಪಾವತಿ ಭಾಂಡೆಗೆ, ರುಕ್ಮಿಣಿಬಾಯಿ ಮೆಹರವಾಡೆ ಮಾತನಾಡಿದರು. ತುಳಜಾಬಾಯಿ ಕಬಾಡೆ, ಅನ್ನಪೂರ್ಣಾ ಬಾಕಳೆ, ಕೃಷ್ಣಾಬಾಯಿ ರಾಯಬಾಗಿ, ಶಕುಂತಲಾಬಾಯಿ ಧಲಬಂಜನ, ಲಕ್ಷ್ಮೀಬಾಯಿ ಪವಾರ, ರೇಖಾ ರಾಯಬಾಗಿ, ಲೀಲಾಬಾಯಿ ರಾಜೊಳ್ಳಿ, ಮೇಘರಾಜ ಕಾಟಾಪುರ, ಚಂದ್ರಶೇಖರ ಪೂಜಾರ, ಶಾಮಣ್ಣ ವನ್ನಾಲ, ಮೌನೇಶ ಮತ್ತಿತರರಿದ್ದರು.
ಜಿಲ್ಲಾ ಮಟ್ಟಕ್ಕೆ ಆಯ್ಕೆ
ಗಜೇಂದ್ರಗಡ: ಸ್ಥಳೀಯ ಜಗದ್ಗುರು ತೋಟದಾರ್ಯ ಕನ್ನಡ ಮಾಧ್ಯಮ ಪ್ರೌಢ ಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕೋಲಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿ ತೇಜಸ್ವಿನಿ ಮ್ಯಾಗೇರಿ, ಮೇಘಾಸಿದ್ಧ ರೆಡ್ಡಿ, ಸಿಂಧು ಹೇಮಬಾವಿ, ಸುಷ್ಮಾ ಹೊಸಮನಿ, ಮಂಜುಶ್ರೀ ಸೊಬರದ, ಜರಿನಾಬಾನು ಮೋಮಿನ್, ಶೃತಿ ನಡಕಟ್ಟಿನ, ಕಾವ್ಯಾ ಮ್ಯಾಗೇರಿ, ಕೋಲಾಟದಲ್ಲಿ ಹಾಗೂ ಫಾರಸ್ ಚೌಧರಿ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಆಡಳಿತ ಮತ್ತು ಶಾಲಾ ಸಿಬ್ಬಂದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

--
ಹುಡೇದ ಮಹಾಲಕ್ಷ್ಮೀ ದೇವಿ ಕಾರ್ತಿಕ ದೀಪೋತ್ಸವ
ಗಜೇಂದ್ರಗಡ:  ಸ್ಥಳೀಯ ಅಸಂಖ್ಯಾತ ಭಕ್ತರು ಆರಾಧಿಸುವ ಹುಡೇದ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಕಾರ್ತಿಕ ದೀಪೋತ್ಸವ ಸಮಾರಂಭ ಅತ್ಯಂತ ವೈಭವದಿಂದ ನಡೆಯಿತು.
ಈ ವೇಳೆ ದೇಗುಲ ಕಮಿಟಿ ಅಧ್ಯಕ್ಷ ಸುಭಾಸ ವನ್ನಾಲ ಮಾತನಾಡಿ, ಧರ್ಮದ ಸಾತ್ವಿಕ ಆಚರಣೆಗಳ ಮೂಲಕ ಸಮಾಜದಲ್ಲಿ ಶಾಂತಿ ಸಾಮರಸ್ಯ ಮೂಡಿಸುವ ಕಾರ್ಯ ಆಗಬೇಕಾಗಿದೆ. ಸಮಾಜ ಎಲ್ಲ ಸಮುದಾಯಗಳ ಜನರ ಭಾವನೆಗಳನ್ನು ಒಂದುಗೂಡಿಸುವ ಕೆಲಸದಲ್ಲಿ ಸಮುದಾಯದ ಪಾತ್ರ ಮಹತ್ವದ್ದಾಗಿದೆ ಎಂದರು.
ಬಿ.ಎಂ. ಸಜ್ಜನ, ಲಕ್ಷ್ಮಣ ಬಾಕಳೆ, ರೇಣಪ್ಪ ಚಿನ್ನೂರ, ಲಕ್ಷ್ಮಣ ರಾಮಜಿ, ಕಳಕಪ್ಪ ಸಂಚಾಲಿ, ವೀರೇಶ ಗಾಳಿ, ಚನ್ನಬಸಪ್ಪ ಬಂಡಿ, ಅಶೋಕ ಹಳ್ಳದ, ಮಹಾಂತೇಶ ಅಗ್ನೂರ, ಚೇತನ ಬಾಕಳೆ, ಉಮೇಶ ಮಾದನೂರ, ಈಶಣ್ಣ ಮಂತಾ, ಸಂತೋಷ ಮಹೇಂದ್ರಕರ್, ರಾಮು ರಾಯಬಾಗಿ, ಲಕ್ಷ್ಮಣ ಗಾಳಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement