ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪೌಷ್ಟಿಕ ಆಹಾರದಿಂದ ಆರೋಗ್ಯವಂತ ಮಕ್ಕಳು

Lingaraj Badiger
Updated On : 18 Dec 2013, 11:42 am

ಗದಗ: ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯವಂತ ಮಕ್ಕಳನ್ನು ಪಡೆಯಬಹುದು ಎಂದು ಅಡವಿಸೋಮಾಪುರ ಉಪಕೇಂದ್ರದ ಆರೋಗ್ಯ ಸಹಾಯಕ, ಆರೋಗ್ಯ ಸಹಾಯಕ ಸಂಘದ ಜಿಲ್ಲಾಧ್ಯಕ್ಷ ಸಿದ್ದಪ್ಪ ಲಿಂಗದಾಳ ಹೇಳಿದರು. ಈಚೆಗೆ ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ ನೇತೃತ್ವದಲ್ಲಿ ಏರ್ಪಡಿಸಿದ್ದ ಆರೋಗ್ಯವಂತ ಮಕ್ಕಳ ಹಾಗೂ ತಾಯಂದಿರ ಸಭೆಯಲ್ಲಿ   ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿನ ಗರ್ಭಿಣಿ ತಾಯಂದಿರು ಗರ್ಭಾವಸ್ಥೆಯಲ್ಲಿ ಅಪೌಷ್ಟಿಕತೆ ಮತ್ತು ರಕ್ತಹಿನತೆಯಿಂದ ಬಳಲುತ್ತಿದ್ದು, ಅವರು ಆರೋಗ್ಯವಂತ ಮಕ್ಕಳನ್ನು ಪಡೆಯುವಲ್ಲಿ ಸಾಧ್ಯವಾಗುತ್ತಿಲ್ಲ. ಆರೋಗ್ಯ ಇಲಾಖೆ ತಾಯಂದಿರು ಮತ್ತು ಮಕ್ಕಳಿಗೆ ನೀಡುವಂತ ಆರೋಗ್ಯ ಶಿಕ್ಷಣದ ಸಲಹೆ ಪಡೆದು, ಮಾರಕ ರೋಗಗಳಾದ ಕ್ಷಯ, ಧನುರ್ವಾಯು, ಪೊಲಿಯೋ, ಕಾಮಾಲೆಯಂಥ ಮಾರಕ ರೋಗಗಳಿಗೆ ನೀಡುವಂತಹ ಲಸಿಕೆಯನ್ನು ಮಕ್ಕಳಿಗೆ ತಪ್ಪದೆ ಕೊಡಿಸಬೇಕು ಎಂದರು. ಪಾಪನಾಸಿ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಡಾ. ಸಾಯಿಪ್ರಕಾಶ ಮಡಿವಾಳರ, ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮಾವತಿ ಚಿಲ್ಲಾಳ, ಬೇಬಿ ಶೋದಲ್ಲಿ 6ರಿಂದ 1 ವರ್ಷದ ಮಕ್ಕಳಲ್ಲಿ ಪ್ರಥಮ ಬಹುಮಾನವನ್ನು ನಿವೇದಿತಾ ಸೊರಟೂರು. ಅನೀತಾ ಖಾನಾಪುರ ದ್ವಿತೀಯ ಹಾಗೂ ಮಹಾಂತೇಶ ತೃತೀಯ ಸ್ಥಾನ ಪಡೆದರು. 1ರಿಂದ 2 ವರ್ಷದ ಮಕ್ಕಳಲ್ಲಿ ಸಂಜಯ ನಡವಲಗುಡ್ಡ ಪ್ರಥಮ, ರೈಮನ್ನಸಾಬ ಕಂಪ್ಲಿ ದ್ವಿತೀಯ ಹಾಗೂ ಲಕ್ಷ್ಮಣ ಹೊಸಳ್ಳಿ ತೃತೀಯ ಸ್ಥಾನ ಪಡೆದರು. ಆರೋಗ್ಯ ಸಹಾಯಕಿ ಎಂ.ಎನ್. ದಂಡಿನ್, ಎಲ್.ಎನ್. ಮೆಣಸಿನಕಾಯಿ, ಗೀತಾ ಕಂಬಳಿ, ಬಸವಣ್ಣೆವ್ವ ಅಂಗಡಿ, ಮೀನಾಕ್ಷಿ ವಡ್ಡರ, ರೇಣುಕಾ ಪುರದ, ಮಾಲಾ ಮೇವುಂಡಿ, ಪಾರವ್ವ ಜಗ್ಗಲ, ಬರಮವ್ವ ಹಮ್ಮಗಿ ಇನ್ನಿತರರು ಉಪಸ್ಥಿತರಿದ್ದರು. ಬಿ.ಎಚ್. ಕುಲಕರ್ಣಿ ಸ್ವಾಗತಿಸಿದರು. ಎಸ್.ಬಿ. ಗಡಾದ ನಿರೂಪಿಸಿದರು. ಎಂ.ಎನ್. ದಂಡಿನ ವಂದಿಸಿದರು.
ಅಬ್ದುಲ್‌ರಹಿಮಾನ್‌ಸಾಬ್ ಮುಲ್ಲಾ ನಿಧನ
ಮುಂಡರಗಿ:  ಪಟ್ಟಣದ ಮುಸ್ಲಿಂ ಸಮಾಜದ ಹಿರಿಯರು ಹಾಗೂ ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅಬ್ದುಲ್‌ರಹಿಮಾನ್‌ಸಾಬ್ ಇಮಾಮಸಾಬ್ ಮುಲ್ಲಾ (78) ಇವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ಮೃತರಿಗೆ ನಾಲ್ವರು ಪುತ್ರರು, ಐವರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಇದ್ದಾರೆ.ಇವರ ನಿಧನಕ್ಕೆ ಶಾಸಕ ರಾಮಕೃಷ್ಣ ದೊಡ್ಡಮನಿ, ವೈ.ಎನ್. ಗೌಡರ, ಕರಬಸಪ್ಪ ಹಂಚಿನಾಳ, ಧ್ರುವಕುಮಾರ ಹೊಸಮನಿ, ಆರ್.ಎಂ. ತಪ್ಪಡಿ, ಅಬ್ದುಲ್ ಹಣಗಿ, ಡಾ. ಅನ್ನದಾನಿ ಮೇಟಿ, ಫಕ್ರುಸಾಬ್ ಹಾರೋಗೇರಿ, ಬಿ.ಬಾಬು, ಕಬಲಾಸಾಬ್ ಆಲೂರ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement