ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳು ಸಂಸ್ಕಾರವಂತರಾಗಿ ಬೆಳೆಯಲಿ

Mainashree
Updated On : 20 Dec 2013, 10:45 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಡಿ. 19
ಮಕ್ಕಳು ಸಂಸ್ಕಾರವಂತರಾಗಿ ಬದುಕು ನಡೆಸಿದರೆ, ಭಯಾನಕ ರೋಗಗಳನ್ನು ಸಮಾಜದಿಂದ ನಿರ್ಮೂಲನೆ ಮಾಡಬಹುದೆಂದು ತಾಲೂಕಿನ ಮೇವುಂಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶರಣು ಗೋಗೇರಿ ಹೇಳಿದರು.
ಅವರು ಈಚೆಗೆ ತಾಲೂಕಿನ ಮೇವುಂಡಿ ಗ್ರಾಮದ ಶಾಂತಾಬಾಯಿ ಮಲ್ಲಪ್ಪ ಕೊರ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜೈ ಭೀಮ ಗೀಗೀ ಜಾನಪದ ಕಲಾ ತಂಡದವರು ನಡೆಸಿದ ಏಡ್ಸ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಡೀ ರಾಜ್ಯ ಹಾಗೂ ಜಿಲ್ಲೆಯಲ್ಲಿ ಹಲವಾರು ಅಮಾಯಕರು ಏಡ್ಸ್‌ನಂತಹ ಭಯಾನಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಏಡ್ಸ್ ರೋಗವನ್ನು ತಡೆಗಟ್ಟುವಲ್ಲಿ ಜನರು ವಿಶೇಷವಾಗಿ ಯುವ ಜನರು ಜಾಗ್ರತರಾಗಬೇಕಾಗಿರುವುದು ಅವಶ್ಯ. ಸರ್ಕಾರ ಏಡ್ಸ್ ನಿಯಂತ್ರಣಕ್ಕೆ ಕರ್ನಾಟಕ ಏಡ್ಸ್ ಫ್ರೀವೆನ್ಸ್ ಸಂಸ್ಥೆ ಮೂಲಕ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನೀಲಗುಂದದ ಜೈ ಭೀಮ ಗೀಗೀ ಜಾನಪದ ಕಲಾ ತಂಡದ ಬಸವರಾಜ ಜಕ್ಕಮ್ಮನವರ ಹಾಗೂ ಸಂಗಡಿಗರು ಗೀಗೀ ಪದಗಳನ್ನು ಹಾಡಿದರು. ಈ ಸಂದರ್ಭದಲ್ಲಿ ಎಸ್.ಡಿ. ಚಿಗರಿ. ವಿ.ಡಿ. ಶಿರಗುಂಪಿ, ಎ.ಬಿ. ರಂಗರೇಜಿ ಮುಂತಾದವರು ಉಪಸ್ಥಿತರಿದ್ದರು. ಎಲ್.ಎಚ್. ಯಣ್ಣಿ ಸ್ವಾಗತಿಸಿದರು. ಪಿ.ಆರ್. ನಡುವಿನಹಳ್ಳಿ ನಿರೂಪಿಸಿದರು. ಎನ್.ಎಂ. ಚಿತ್ರಗಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement