ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಅವಶ್ಯ

Mainashree
Updated On : 20 Dec 2013, 10:44 am

ಶಿರಹಟ್ಟಿ: ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿಯಂತಹ ಸ್ಪರ್ಧೆಗಳು ಅವಶ್ಯ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಹೇಳಿದರು.
ಗುರುವಾರ ಮ್ಯಾಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದವರು ಹಮ್ಮಿಕೊಂಡಿದ್ದ 2013-14ನೇ ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುನಂದಾ ಬಿದರಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ ಶಾರದಾ ಕವಲೂರ, ಪಪಂ ಸದಸ್ಯ ಎಚ್.ಡಿ. ಮಾಗಡಿ, ಸಂತೋಷ ಕುರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈ.ಎಸ್. ಪಾಟೀಲ, ಜಯಶ್ರೀ ಗುಡಿ, ಬಿ.ಎಸ್. ಈಳಗೇರ, ಬಿ.ಎಸ್. ಹರ್ಲಾಪುರ, ಕೆ.ಎ. ಬಳಿಗೇರ, ಬಸವಣ್ಣೆಪ್ಪ ತುಳಿ, ಎನ್.ಆರ್. ಸಾತಪುತೆ, ನಾಗರಾಜ ಡಂಬಳ, ಎಚ್.ಆರ್. ಬೆನಹಾಳ, ಸುರೇಶ ವರವಿ, ಎಂ.ಸಿ. ಹಿರೇಮಠ, ಜೆ.ಡಿ. ಕಲೇಗಾರ ಕಾರ್ಯಕ್ರಮದಲ್ಲಿ ಇದ್ದರು. ಜಿ.ಆರ್. ಸರ್ಜಾಪುರ ಸ್ವಾಗತಿಸಿದರು. ಎಂ.ಕೆ. ಲಮಾಣಿ ನಿರೂಪಿಸಿದರು. ಸುರೇಶ ಸರ್ಜಾಪುರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement