ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು 50ನೇ ಶನಿವಾರ ಸಾಹಿತ್ಯ ಸಂಜೆ: ಕವಿಗೋಷ್ಠಿ, ಉಪನ್ಯಾಸ ಕಾರ್ಯಕ್ರಮ

Mainashree
Updated On : 21 Dec 2013, 11:27 am

ಗದಗ: ನಗರದ ಹಾತಲಗೇರಿ ರಸ್ತೆಯಲ್ಲಿರುವ ಸಾಯಿಬಾಬಾ ಮಂದಿರ ಹತ್ತಿರದ ಆರ್.ಡಿ. ಹೂವಣ್ಣನವರ ಜಾಗೆಯಲ್ಲಿ ಡಿ. 21ರ ಸಂಜೆ 4.30ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ 50ನೇ ಶನಿವಾರ ಸಾಹಿತ್ಯ ಸಂಜೆ ಸಂಭ್ರಮದಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಹಾಗೂ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. ಹುಬ್ಬಳ್ಳಿಯ ಸಾಹಿತಿ ಎಂ.ಡಿ. ಗೋಗೇರಿ ಕವಿತ್ವ ಹುಟ್ಟುವ ಬಗೆ ಕುರಿತು ಉಪನ್ಯಾಸ ನೀಡುವರು. ಗದುಗಿನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಕ ರಾಜೇಂದ್ರ ಪ್ರಸಾದ ಕವಿಗೋಷ್ಠಿಯ ಆಶಯ ಭಾಷಣ ಮಾಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ನಗರಸಭೆ ಸದಸ್ಯ ಅನಿಲ ಸಿಂಗಟಾಲೂರು, ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕ ಆರ್.ಡಿ. ಹೂವಣ್ಣನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಡಾ. ಶೇಖರ್ ಲದ್ವಾ, ಡಾ. ಎಚ್.ಬಿ. ಪೂಜಾರ, ದೊಡ್ಡಯ್ಯ ಅರವಟಿಗಿಮಠ, ಎಸ್.ಯು. ಸಜ್ಜನಶೆಟ್ಟರ್, ಅನ್ನದಾನಿ ಗಂಜಿಹಾಳ, ವೀರಣ್ಣ ಅಂಗಡಿ, ವೈ.ವೈ. ಅಂಬಿಗೇರ, ಶಿವಶಂಕರ ಆರಟ್ಟಿ, ಚೇತನ ಸೊಲಗಿ, ಎಂ.ಡಿ. ಮಾದರ, ಲಾಡಮಾ ನದಾಫ್, ಪ್ರಮೀಳಾ ಸಾಂಗ್ಲಿಕರ್ ಕವನ ವಾಚನ ಮಾಡಲಿದ್ದಾರೆ. ಮುಂಡರಗಿಯ ಕರ್ನಾಟಕ ಜನಪದ ಕಲಾ ತಂಡ ಇವರಿಂದ ಕಲಾ ಪ್ರದರ್ಶನ, ರಂಜಿತಾ ಅಂಗಡಿ ಅವರಿಂದ ಭರತನಾಟ್ಯ ಜರುಗಲಿದೆ. ಕಾರಣ ಜಿಲ್ಲೆಯ ಕಸಾಪದ ಆಜೀವ್ ಸದಸ್ಯರು, ಕನ್ನಡಾಭಿಮಾನಿಗಳು, ಸಾಹಿತ್ಯ ಪ್ರೇಮಿಗಳು, ಯುವ ಬರಹಗಾರರು, ಮಹಿಳಾ ಸಾಹಿತಿಗಳು, ಸಾಹಿತ್ಯಾಸ್ತಕರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಜಿಲ್ಲಾ ಗೌರವ ಕಾರ್ಯದರ್ಶಿ ಶರಣು ಗೊಗೇರಿ, ಡಾ. ಸಂಗಮೇಶ ತಮ್ಮನಗೌಡ್ರ, ಗೌರವ ಕೋಶಾಧ್ಯಕ್ಷ ಹಾಗೂ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮ ಸಂಚಾಲಕ ಮಲ್ಲೇಶ ಡಿ.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement