ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮೋದಿ ಪ್ರಧಾನಿಯಾಗಲು ಯುವಕರು ಒಂದಾಗಿ

Mainashree
Updated On : 21 Dec 2013, 11:26 am

ಮುಂಡರಗಿ: ಈ ದೇಶಕ್ಕೆ ನರೇಂದ್ರ ಮೋದಿಯವರಂತಹ ಅಭಿವೃದ್ಧಿ ಹರಿಕಾರರು ಬೇಕಾಗಿರುವುದು ಅತಿ ಅವಶ್ಯವಾಗಿದೆ. ಅವರು ಮುಂದಿನ ಪ್ರಧಾನಿಯಾಗಬೇಕಾದರೆ ಯುವಕರೆಲ್ಲರೂ ಒಂದಾಗಿ ಪಕ್ಷದ ಸಂಘಟನೆಗೆ ಕಂಕಣ ಬದ್ಧರಾಗಿ ಕಾರ್ಯ ನಿರ್ವಹಿಸಬೇಕು ಎಂದು ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಮಾಜಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಹೇಳಿದರು.
ಅವರು ಗುರುವಾರ ಮುಂಡರಗಿ ಪಟ್ಟಣದ ಪುರಸಭೆ ಆವರಣದಲ್ಲಿರುವ ಗಾಂಧಿಭವನದಲ್ಲಿ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ದುರಾಡಳಿತದಿಂದ ಬೇಸತ್ತಿರುವ ಜನತೆ ಬೆಲೆ ಏರಿಕೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವೆಲ್ಲವುಗಳಿಂದ ಹೊರ ಬರಬೇಕಾದರೆ ದೇಶದಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವುದು ಅನಿವಾರ್ಯವಾಗಿದೆ ಎಂದರು. ಜಿಲ್ಲಾ ಯುವ ಬಿಜೆಪಿ ಅಧ್ಯಕ್ಷ ಛಗನ್ ರಾಜಪುರೋಹಿತ್, ಅಧ್ಯಕ್ಷತೆ ವಹಿಸಿದ್ದ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಯುವ ಘಟಕದ ಅಧ್ಯಕ್ಷ ದೇವಪ್ಪ ಇಟಗಿ, ತಿಮ್ಮರೆಡ್ಡಿ ಮರಡ್ಡಿ, ಶಂಕರಗೌಡ ಪಾಟೀಲ, ನಿಂಗನಗೌಡ ಹರ್ತಿ ಮುಂತಾದವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ಹುಳಕನ್ನವರ, ಜಾನು ಲಮಾಣಿ, ಶಿವು ನಾಡಗೌಡ್ರ, ಸುರೇಶ ಮಾಳೆಕೊಪ್ಪ ಮುಂತಾದವರು ಉಪಸ್ಥಿತರಿದ್ದರು. ಸುಭಾಸ ಗುಡಿಮನಿ ಸ್ವಾಗತಿಸಿದರು. ಬಿ.ಎಸ್. ಸಸಿಮಠ ನಿರೂಪಿಸಿದರು. ಬಸವರಾಜ ಬಿಳಿಮಗ್ಗದ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement