ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪತ್ರಕರ್ತನ ಮೇಲೆ ಹಲ್ಲೆ: ಸಂಘಟನೆಗಳಿಂದ ಪ್ರತಿಭಟನೆ

Mainashree
Updated On : 22 Dec 2013, 2:41 am

ನರಗುಂದ:  ತಾಲೂಕಿನ ಹಿರೇಕೊಪ್ಪ ಗ್ರಾಮದ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ರಚನೆ ಮಾಡದೇ ಇರುವ ಕುರಿತು ಸುದ್ದಿ ಪ್ರಕಟಿಸಿದ ಪತ್ರಕರ್ತನ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಗುರುವಾರ ತಾಲೂಕಿನ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ಜರುಗಿಸಿ, ತಹಸೀಲ್ದಾರ್ಗೆ ಮನವಿ ಸಲ್ಲಿಸಿದವು. ಕನ್ನಡಪರ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಎಬಿವಿಪಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಪದಾಧಿಕಾರಿಗಳು ಪಟ್ಟಣದ ಮಿನಿವಿಧಾನ ಸೌಧಕ್ಕೆ ತೆರಳಿ ಪ್ರತಿಭಟನೆ ಜರುಗಿಸಿದವು. ಮುಖಂಡರಾದ ಚನ್ನು ನಂದಿ ಮಾತನಾಡಿ, ಕಾಂಗ್ರೆಸ್ ಬೆಂಬಲಿತ ಕೆಲವರು ಬುಧವಾರ ಪರ್ತಕರ್ತ ಸಂಗನಗೌಡ ಖಾನಪ್ಪಗೌಡ್ರವರ ಮೇಲೆ ಹಲ್ಲೆ ಮಾಡಿದ್ದು ಖಂಡನಾರ್ಹ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಪೊಲೀಸರು ತನಿಖೆ ಕೈಗೊಂಡು ತಪ್ಪಿತಸ್ಥರನ್ನು ಬಂಧಿಸಿಲ್ಲ. ಈಗಲಾದರೂ ಎಚ್ಚೆತ್ತು ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು. ವಾಸುರಡ್ಡಿ ಹೆಬ್ಬಾಳ್ಳಿ, ರವಿ ಚಿಂತಾಲ, ಹನುಮಂತ ಮ್ಯಾಗೇರಿ, ಬಸವರಾಜ ತಾವರೆ, ಆರ್.ಎಚ್. ಮೇಟಿ, ನಿಕಲ ಸುಬೇದಾರ, ಸಂದೀಪ ಸುಬೇದಾರ, ಬಸು ಗಡೇದಾರ, ವೀರೇಶ ಪೂಜಾರ, ಮಹೇಶ ಹಿರೇಮಠ, ಪ್ರವೀಣ ಯಳ್ಳೂರ, ಶಶಿಕುಮಾರ ಭೋವಿ, ಅನಿಲ ಶಿಂದೆ, ವಿಶ್ವನಾಥ ದೇಶಪಾಂಡೆ, ರಾಘವೇಂದ್ರ ಗುಜಮಾಗಡಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement