ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಂತೂರ-ಬೆಂತೂರಲ್ಲಿ ಕಲಿಕೋತ್ಸವ

Mainashree
Updated On : 23 Dec 2013, 11:09 am

ಗದಗ:  ತಾಲೂಕಿನ ಅಂತೂರ-ಬೆಂತೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 1ರಲ್ಲಿ ಕಲಿಕೋತ್ಸವ ಕಾರ್ಯಕ್ರಮ ಈಚೆಗೆ ಯಶಸ್ವಿಯಾಗಿ ಜರುಗಿತು.  ಕಾರ್ಯಕ್ರಮದಲ್ಲಿ ವಿ.ಸಿ. ನರೇಗಲ್ಲಮಠ ಮಾತನಾಡಿ, ಕಲಿಕೋತ್ಸವ ಇದು ಒಂದು ವಿನೂತನ ಕಾರ್ಯಕ್ರಮವಾಗಿದೆ. ಮಕ್ಕಳ ಗುಣಮಟ್ಟವನ್ನು ಹೆಚ್ಚಿಸಲು ಮಾಡಿದ ಕಾರ್ಯಕ್ರಮ ಮತ್ತು ಕಲಿಕಾ ಪ್ರಕ್ರಿಯೆಯ ಗುಣಾತ್ಮಕ ಕಲಿಕೆಗೆ ಸಾಬೀತುಪಡಿಸುವುದಾಗಿದೆ ಎಂದರು. ಗದಗ ಗ್ರಾಮೀಣ ವಲಯದ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಸ್. ತಳವಾರ ಮಾತನಾಡಿದರು. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಕುರುಬರ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶಗೌಡ ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ಎಂ.ಬಿ. ಬಂಕದ, ಸದಸ್ಯ ಎಚ್.ವಿ. ಆಲೂರ, ವೈ.ವಿ. ಜಿನಗಿ, ಎಂ.ಎಂ. ಚಿಂಚಲಿ, ಲಲಿತಾ ಬಿರಸಾಲ ಮುಂತಾದವರು ಹಾಜರಿದ್ದರು. ಎಸ್.ವಿ.ಕೆ. ಹಿರೇಮಠ ಸ್ವಾಗತಿಸಿದರು. ಪ್ರಕಾಶ ಗಿಡ್ಡಣ್ಣವರ ನಿರೂಪಿಸಿದರು. ಎಲ್.ಬಿ. ತಿಮ್ಮನಗೌಡ್ರ ವಂದಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement