ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 23 Dec 2013, 11:10 am

ಶ್ರದ್ಧಾಂಜಲಿ ಸಭೆ
ಗದಗ: ಗದುಗಿನ ಗಣ್ಯ ವ್ಯಾಪಾರಸ್ಥ ಎಚ್.ಕೆ. ಮುಲ್ಲಾ ಅವರ ಮಾತೋಶ್ರೀ ಕಾಬಿರಜಿ ಕಾಶೀಮಸಾಬ್ ಮುಲ್ಲಾ ಅವರ ನಿಧನಕ್ಕೆ ಗದುಗಿನ ಅಡವೀಂದ್ರ ಮಠದಲ್ಲಿ ಮಹೇಶ್ವರ ಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ದಿವಂಗತರು ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಹೊಂದಿದ್ದ ಕಳಕಳಿಯನ್ನು ಹಾಗೂ ಧಾನ ಧರ್ಮದ ವಿಷಯದಲ್ಲಿ ಹೊಂದಿದ್ದ ಗುಣವನ್ನು ಬಣ್ಣಿಸಿ ಸ್ವಾಮೀಜಿ ಮಾತನಾಡಿದರು. ಸಭೆಯಲ್ಲಿ ಬಿ.ಎಂ. ಬಿಳೆಯಲಿ, ಪ್ರೊ. ಕೆ.ಎಚ್. ಬೇಲೂರ, ಬಿ.ಬಿ. ಹೂಗಾರ, ಬಿ.ಎನ್. ದಾಯಮ್ಮನವರ ಹಾಗೂ ಮುಧೋಳ ವಕೀಲರು, ಎಂ.ಎಸ್. ಹುಬಳಿಮಠ, ಎಸ್.ಬಿ. ಪಲ್ಲೇದ, ಕುಂದ್ರಾಳ ಹಿರೇಮಠ, ಬಸವರಾಜ ಶಾಬಾದಿಮಠ ಅವರು ಮೃತರ ಗುಣಗಾನ ಮಾಡಿ ಮಾತನಾಡಿದ ಬಳಿಕ, ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಎರಡು ನಿಮಿಷ ಮೌನ ಆಚರಿಸಲಾಯಿತು.
ಕಳೆ ನಿಯಂತ್ರಣ ಔಷಧಿ ಉಪಯೋಗಿಸಲು ಸಲಹೆ
ನರಗುಂದ: ತಾಲೂಕಿನ ಶಿರೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತಿ ಬೆಳೆಯಲ್ಲಿ ಇರುವ ಕಳೆ ನಿಯಂತ್ರಣ ಮಾಡುವ ಬೋಲ್‌ಗಾರ್ಡ್ 2 ರೌಂಡಪ್ ರೆಡಿ ಫ್ಲೆಕ್ಸ್ ತಂತ್ರಜ್ಞಾನದ ಔಷಧಿಯನ್ನು ರೈತರು ಉಪಯೋಗಿಸಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಲಾಯಿತು.  ತಾಲೂಕಿನ ಶಿರೋಳ ಗ್ರಾಮದಲ್ಲಿ ಈಚೆಗೆ ನಡೆದ ಪ್ರಾತ್ಯಕ್ಷಿಕೆಯಲ್ಲಿ ಸಂಸ್ಥೆಯ ಪ್ರತಿನಿಧಿ ಬಿ.ಎಸ್. ಪಾಟೀಲ ವಿವರಿಸಿದರು. ದ್ಯಾಮನಗೌಡ ಪಾಟೀಲ, ಯಲ್ಲಪ್ಪ ಶಿವಪುರ, ಗ್ರಾಪಂ ಅಧ್ಯಕ್ಷ ಬಸಮ್ಮ ವಸ್ತ್ರದ, ಸೋಪ್ಪನ, ಜಿ.ಎಸ್. ನಾಗಲೋಟಮಠ, ಎಸ್.ಎ. ಸೊಪ್ಪಿನ, ವೈ.ಎಫ್. ನದಾಫ್ ಮುಂತಾದವರು ಹಾಜರಿದ್ದರು.
ಬಸವಣ್ಣನವರ ಕೊಡುಗೆ ದೊಡ್ಡದು: ಶ್ರೀ
ನರಗುಂದ:  12ನೇ ಶತಮಾನದಲ್ಲಿ ಬಸವಾದಿ ಶಿವ ಶರಣರು ಈ ಸಮಾಜದಲ್ಲಿ ಹಲವಾರು ಪರಿವರ್ತನೆ ತರುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಬೆಳ್ಳೇರಿ ಸದ್ಗರು ಸಚ್ಚಿದಾನಂದ ಶ್ರೀಗಳು ಹೇಳಿದರು. ಅವರು ಈಚೆಗೆ ತಾಲೂಕಿನ ಬೆಳ್ಳೇರಿಯಲ್ಲಿ 16ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣವರು ಎಲ್ಲ ಧರ್ಮದ ಶರಣರ ಕಲ್ಯಾಣ ಅನುಭವ ಮಂಟಪದ ಮೂಲಕ ಅಂದೇ ಸಂಸತ್ ನಿರ್ಮಿಸಿದ್ದರಿಂದ ಸಮಾಜದಲ್ಲಿ ಎಲ್ಲ ಸಮುದಾಯದವರು ಒಂದಾಗಲು ಸಾಧ್ಯವಾಗಿತ್ತು ಎಂದರು. ಈ ಸಂದರ್ಭದಲ್ಲಿ ಕೊಣ್ಣೂರ ವಿರಕ್ತಮಠದ ಡಾ. ಶಿವಕುಮಾರ ಶ್ರೀಗಳು, ರಮೇಶ ಈಳಿಗೇರ ಗ್ರಾಮಸ್ಥರು ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement