ಸಾಮಾಜಿಕ ಕಳಕಳಿಯ ಕಾವ್ಯ ಅರಳಲಿ
ಗದಗ: ನಮ್ಮ ಯುವ ಸಮುದಾಯದಿಂದ ಸಾಮಾಜಿಕ ಕಳಕಳಿಯ ಚಿಂತನೆಯ ಕಾವ್ಯಗಳು ಅರಳಬೇಕಿದೆ ಎಂದು ಸಾಹಿತಿ ಎಂ.ಡಿ. ಗೋಗೇರಿ ಹೇಳಿದರು.
ಸಾಯಿ ಮಂದಿರ ಹತ್ತಿರದ ಆರ್.ಡಿ. ಹೂವಣ್ಣನವರ ಬಯಲು ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಶನಿವಾರ ಸಾಹಿತ್ಯ ಸಂಜೆಯ 50ರ ಸಂಭ್ರಮದಲ್ಲಿ ಕವಿತ್ವ ಅವರು ಜಿಲ್ಲಾ ಕಸಾಪ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಹಾತಲಗೇರಿ ರಸ್ತೆ ಹುಟ್ಟುವ ಬಗೆ ವಿಷಯ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ತಮ್ಮ ಕಲ್ಪನೆ ಹಾಗೂ ಭಾವನೆಗಳನ್ನು ಕಾವ್ಯದ ಮೂಲಕ ವ್ಯಕ್ತಗೊಳಿಸಿ, ಮೌಲ್ಯಯುತ ಸಂದೇಶಗಳನ್ನು ನೀಡುವ ಮಹತ್ವದ ಜವಾಬ್ದಾರಿ ಕವಿಯ ಮೇಲಿದೆ ಎಂದರು.
ಕವಿಗೋಷ್ಠಿಯ ಆಶಯ ಭಾಷಣ ಮಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಪ್ರಸಾದ ಮುಂತಾದವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಒಂದೂವರೆ ವರ್ಷಗಳಿಂದ ವಿನೂತನ ಕಾರ್ಯಕ್ರಮಗಳಾದ ಶನಿವಾರ ಸಾಹಿತ್ಯ ಸಂಜೆ, ಪಂಚಾಯಿತಿ ಸಾಂಸ್ಕೃತಿಕ ಸೌರಭ, ಶಾಲಾ, ಕಾಲೇಜು ಸಾಹಿತ್ಯ ಸಿಂಚನ, ಜಿಲ್ಲಾ ಹಾಗೂ ತಾಲೂಕು ಸಾಹಿತ್ಯ ಸಮ್ಮೇಳನಗಳನ್ನು ಸೃಜನಾತ್ಮಕವಾಗಿ ಆಯೋಜನೆ ಮಾಡಲಾಗಿದೆ ಎಂದರು.
ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಕವಿಗಳಾದ ಡಾ. ಶೇಖರ ಲದ್ವಾ, ಪ್ರೊ. ದೊಡ್ಡಯ್ಯ ಅರವಟಗಿಮಠ, ಸಿ.ಜಿ.ಬಿ. ಹಿರೇಮಠ, ಶಿವಶಂಕರ ಆರಟ್ಟಿ, ಲಾಡಮಾ ನದಾಫ್, ಎಸ್.ವಿ. ಸಜ್ಜನಶೆಟ್ಟರ, ವೈ.ವೈ. ಅಂಬಿಗೇರ, ಎಂ.ಡಿ. ನದಾಫ, ಚೇತನ ಸೊಲಗಿ ಹಾಗೂ ಮಲ್ಲಿಕಾರ್ಜುನ ಪೂಜಾರ ಮುಂತಾದವರು ಸಮಾಜದ ಹಲವಾರು ಮುಖಗಳನ್ನು ಪರಿಚಯಿಸಿದರು. ಅತಿಥಿಗಳಾಗಿ ನಗರಸಭೆಯ ಅನಿಲ ಶಿಂಗಟಾಲಕೇರಿ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಆರ್.ಡಿ. ಹೂವಣ್ಣವರ ಮಾತನಾಡಿದರು.