ರಾಷ್ಟ್ರಕವಿಗೆ ಸಂಘಟನೆಗಳ ಶ್ರದ್ಧಾಂಜಲಿ
ಗಜೇಂದ್ರಗಡ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ವಿಧಿವಶರಾದ ಹಿನ್ನೆಲೆಯಲ್ಲಿ ಸ್ಥಳೀಯ ಡಿವೈಎಫ್ಐ ಹಾಗೂ ಎಸ್ಎಫ್ಐ ಸಂಘಟನೆ ಕಾರ್ಯಕರ್ತರು ಮಂಗಳವಾರ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಿ, ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್.ಎಫ್.ಐ. ಮುಖಂಡ ಪೀರು ರಾಠೋಡ ಮಾತನಾಡಿ, ಕನ್ನಡ ನಾಡು ಕಂಡ ಹೆಮ್ಮೆಯ ಮೇಧಾವಿ ಕವಿಯಾಗಿದ್ದ ಡಾ. ಜಿ.ಎಸ್.ಎಸ್. ತಮ್ಮ ಸಾಹಿತ್ಯದ ಮೂಲಕ ಕನ್ನಡಿಗರ ಮನೆ ಮನಗಳಲ್ಲಿ ಶಾಶ್ವತ ನೆಲೆಯೂರಿದ್ದಾರೆ. ಇಂತಹ ಮಹಾನ್ ವ್ಯಕ್ತಿ ಕಳೆದುಕೊಂಡ ಕನ್ನಡ ನಾಡು ಬಡವಾಗಿದೆ ಎಂದರು. ಪುರಸಭೆ ಸದಸ್ಯ ಎಂ.ಎಸ್. ಹಡಪದ, ಬಾಲು ರಾಠೋಡ, ಶಿಕ್ಷಣ ಇಲಾಖೆಯ ಎಂ.ಟಿ. ಕೆಂಪಣ್ಣವರ ಮಾತನಾಡಿದರು. ಮಾರುತಿ ಚಿಟಗಿ, ನ್ಯಾಯವಾದಿ ಬಿ.ಎಂ. ಕುಂಬಾರ, ಶಿವಾನಂದ ಬೋಸ್ಲೆ, ಎಸ್.ಎಸ್. ಬಾರಡ್ಡಿ, ಕೆ.ಪಿ. ಕರ್ಣಿ, ಬಾದಾಮಿ, ರಜಾಕ ಗೋಡೇಕಾರ, ಫಯಾಜ ತೋಟದ, ಮೈಬು ಹವಾಲ್ದಾರ್, ಸಕ್ರಪ್ಪ ಮಾಳೋತ್ತರ, ಶಿವಾಜಿ ಗಡ್ಡದ ಬಾಲಕೃಷ್ಣ ಜಾಡಬಂದಿ, ಮಂಜು ರಾಠೋಡ, ಪ್ರಕಾಶ ಹೆಳವರ, ಶರಣಯ್ಯ ಸೂಗಿರಯ್ಯನಮಠ, ಮಾನವ್ವ ರಾಠೋಡ, ಸಾವಿತ್ರಿ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.