ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿವರುದ್ರಪ್ಪನವರ ನಿಧನ: ನಾಡಿಗೆ ನಷ್ಟ

Vishwanath S
Updated On : 25 Dec 2013, 12:45 pm

ಕನ್ನಡಪ್ರಭ ವಾರ್ತೆ, ನರಗುಂದ, ಡಿ. 24
ಈ ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿರುವ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ನಿಧನದಿಂದಾಗಿ ಕನ್ನಡ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಭೈರನಹಟ್ಟಿಯ ಶಾಂತಲಿಂಗ ಶ್ರೀ ಹೇಳಿದರು.
ಅವರು ಸೋಮವಾರ ಸಂಜೆ ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಕನ್ನಡಪರ ಸಂಘಟನೆಗಳು ಹಾಗೂ ಭೈರನಹಟ್ಟಿ ಶ್ರೀಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಜಿ.ಎಸ್.ಎಸ್. ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿದರು.
ಒಬ್ಬ ಶ್ರೇಷ್ಠ ಕವಿ ಈ ನಾಡನ್ನು ತ್ಯಜಿಸಿರುವುದು ನೋವಿನ ಸಂಗತಿ. ಈ ನಾಡಿಗೆ ಜಿ.ಎಸ್.ಎಸ್. ಕೊಡುಗೆ ಅಪಾರ. ರಾಜ್ಯ ಸರ್ಕಾರ ಅವರ ಹೆಸರಿನಲ್ಲಿ ಸ್ಮಾರಕ ಭವನ ಬರುವ ದಿನಗಳಲ್ಲಿ ನಿರ್ಮಾಣ ಮಾಡಬೇಕು ಎಂದರು. ಕಸಾಪದ ಮಾಜಿ ಅಧ್ಯಕ್ಷ ಚನ್ನಬಸಪ್ಪ ಕಂಠಿ ಮಾತನಾಡಿದರು.
ಕಸಾಪ ಅಧ್ಯಕ್ಷ ಪಿ.ಸಿ. ಕಲಹಾಳ, ಸಿ.ಎಚ್. ಕೋರಿ, ಬೆಳವಲನಾಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶಾಂತಕುಮಾರ ಭಜಂತ್ರಿ, ಕಸಾಪ ಕಾರ್ಯದರ್ಶಿ ಆರ್.ಬಿ. ಚಿನಿವಾಲರ, ಚನ್ನು ನಂದಿ, ಚಿದಂಬರ ನಿಂಬರಗಿ, ಡಾ. ನಾಗರಾಜ ಕಾಜಗಾರ, ಕೆ.ಬಿ. ಹುಲಗೂರ, ಶಂಕರ ಕಲ್ಲಿಗನೂರ, ಎ.ಬಿ. ಗೂಳನ್ನವರ, ಮಹಾಂತೇಶ ಸುರಪುರ, ಎಸ್.ಎಸ್. ಉಳ್ಳೇಗಡ್ಡಿ, ಎಂ.ಡಿ. ಮಾದರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement