ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗದಗ: ರೈಲು ಬೇಡಿಕೆ ಈಡೇರಿಸಲು ಆಗ್ರಹ

Vishwanath S
Updated On : 26 Dec 2013, 11:11 am

 ಕನ್ನಡಪ್ರಭ ವಾರ್ತೆ, ಗದಗ, ಡಿ. 25
ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ ಹಾಗೂ ಹೊಸ ರೈಲು ಮಾರ್ಗದ ರಚನೆ ಕುರಿತು ಈಚೆಗೆ ಗದಗ ನಗರಕ್ಕೆ ಆಗಮಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ಗದಗ ಜಿಲ್ಲಾ ಚೇಂಬರ್ ವತಿಯಿಂದ ಮನವಿ ಸಲ್ಲಿಸಲಾಯಿತು.
ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ರಾಜ್ಯದಲ್ಲಿ ರೈಲು ಸೌಕರ್ಯಗಳು ಬಹಳ ಕಡಿಮೆ. ರಾಜ್ಯದವರೂ ಕೇಂದ್ರ ರೇಲ್ವೆ ಮಂತ್ರಿಗಳಾಗಿ ಸೇವೆ ಸಲ್ಲಿಸಿರುವರು. ಆದರೆ ಯಾವುದೇ ರೇಲ್ವೆ ಸೌಕರ್ಯಗಳನ್ನು ಒದಗಿಸಿರುವುದಿಲ್ಲ. ಇನ್ನು ಮುಂದಾದರೂ ನೆನೆಗುದಿಗೆ ಬಿದ್ದಿರುವ ರೈಲು ಯೋಜನೆಗಳ ರಚನೆ ಹಾಗೂ ಇರುವ ಅಡೆತಡೆಗಳನ್ನು ನಿವಾರಿಸಿ ಬರುವ ದಿನಗಳಲ್ಲಿ ನಮ್ಮ ಸರ್ಕಾರಿ ಪಾಲಿನ ಹಣ ಹಾಗೂ ಕೇಂದ್ರ ಸರ್ಕಾರದ ಹಣ ಪಡೆದು ಬಾಕಿ ಇರುವ ತುಮಕೂರು-ಅರಸಿಕೇರಿ ಹಾಗೂ ಚಿಕ್ಕಜಾಜೂರು-ಹುಬ್ಬಳ್ಳಿ ನಡುವಿನ ಜೋಡಿ ಮಾರ್ಗ ರಚನೆ, ಗದಗ- ಸೊಲ್ಲಾಪುರ 330 ಕಿ.ಮೀ. ಜೋಡಿ ಮಾರ್ಗ ರಚನೆ ಪ್ರಾರಂಭಿಸುವುದು, ರೈಲು ಮಾರ್ಗಗಳ ವಿದ್ಯುತ್ತೀಕರಣ, ಬಳ್ಳಾರಿ-ವಾಸ್ಕೋ, ಗದಗ-ಸೊಲ್ಲಾಪುರ, ಹುಬ್ಬಳ್ಳಿ-ಬೆಂಗಳೂರು, ಬಳ್ಳಾರಿ-ಹೊಸಪೇಟೆ ನಡುವಿನ ಮಾರ್ಗದ ವಿದ್ಯುತ್ತೀಕರಣ ಮಾಡಲು ಕ್ರಮ ಕೈಗೊಳ್ಳುವುದು.
ಗದಗ-ಸೊಲ್ಲಾಪುರ ವಿದ್ಯುತ್ತೀಕರಣ ಪ್ರಸ್ತಾವನೆ ಚಾಲನೆಯಲ್ಲಿ ಇರುವುದೆಂದು ಇಲಾಖೆಯಿಂದ ತಿಳಿದು ಬಂದಿದ್ದು ಬೇಗನೆ ಮಂಜೂರು ಮಾಡುವದು, ಹೊಸ ವಿಭಾಗಗಳನ್ನು ರಚನೆ, ಉತ್ತರ ಕರ್ನಾಟಕ ಮುಖ್ಯ ರೇಲ್ವೆ ನಿಲ್ದಾಣಗಳ ಮೂಲ ಸೌಕರ್ಯಗಳನ್ನು ಹೆಚ್ಚಿಸುವುದು, ಕೊಪ್ಪಳ-ಆಲಮಟ್ಟಿ ಸರ್ವೇ ಕಾರ್ಯದ ವರದಿಗೆ ರೇಲ್ವೆ ಬೋರ್ಡ್ ಮಂಜೂರಾತಿ ದೊರಕಿಸುವುದು, ಗದಗ-ಯಲವಗಿ ರೇಲ್ವೆ ಮಾರ್ಗದ ರಚನೆ ಸೇರಿದಂತೆ ನೆನೆಗುದಿಗೆ ಬಿದ್ದಿರುವ ರೇಲ್ವೆ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪ್ರಾರಂಭಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ, ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ, ಸಂಸ್ಥೆಯ ರೇಲ್ವೆ ಉಪ ಸಮಿತಿ ಚೇರ್‌ಮನ್ ಜಿ.ಕೆ. ಆದಪ್ಪಗೌಡ್ರ, ಮಾಜಿ ಅಧ್ಯಕ್ಷ ಚಂದ್ರು ಬಾಳಿಹಳ್ಳಿಮಠ, ರಾಜಶೇಖರ ಶಿರೂರ, ಎಸ್.ಕೆ. ಕುರಡಗಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement