ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಾಜಪೇಯಿ ಜನ್ಮದಿನ: ಹಾಲು, ಹಣ್ಣು ವಿತರಣೆ

Vishwanath S
Updated On : 27 Dec 2013, 12:26 pm

ಕನ್ನಡಪ್ರಭ ವಾರ್ತೆ, ರೋಣ, ಡಿ. 26  
ದೇಶ ಕಂಡ ಅಪರೂಪದ ರಾಜಕಾರಣಿಗಳಲ್ಲೊಬ್ಬರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಭಿವೃದ್ಧಿ ಪರ ಚಿಂತಕರಾಗಿದ್ದು, ಇವರು ಪ್ರಧಾನಿಯಾಗಿದ್ದಾಗ ಕೈಗೊಂಡ ಅಭಿವೃದ್ಧಿಪರ ಯೋಜನೆಗಳು ಇಂದಿಗೂ ಜನಮನದಲ್ಲಿ ಶಾಶ್ವತವಾಗಿ ಉಳಿದಿವೆ ಎಂದು ಬಿಜೆಪಿ ಮುಖಂಡ ಅಶೋಕ ನವಲಗುಂದ ಹೇಳಿದರು.
ಅವರು ಬುಧವಾರ ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರ 90ನೇ ಜನ್ಮ ದಿನಾಚರಣೆ ನಿಮಿತ್ತ ಪಟ್ಟಣದಲ್ಲಿ ವಿವಿಧ ಆಸ್ಪತ್ರೆಗಳಿಗೆ ತೆರಳಿ ರೋಗಿಗಳಿಗೆ ಹಾಲು, ಹಣ್ಣು ವಿತರಿಸಿ, ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ರಾಜಕಾರಣಿಗಳು ಸ್ವಾರ್ಥಪರ ಲಾಲಸೆಗಾಗಿ ಬಡಿದಾಡುತ್ತಾರೆ. ಅದಕ್ಕೆ ಅಪವಾದ ಎಂಬಂತೆ ವಾಜಪೇಯಿಯವರು ದೇಶದ ಸಮಗ್ರ ಅಭಿವೃದ್ಧಿ ಮತ್ತು ಏಕತೆಗೆ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಇವತ್ತಿಗೂ ಅವರ ಚಿಂತನೆ, ಸಲಹೆಗಳು ಮಹತ್ತರವಾಗಿವೆ. ಅತಿ ಶುಭ್ರ ವ್ಯಕ್ತಿತ್ವವನ್ನು ಹೊಂದುವ ಮೂಲಕ ದೇಶದ ಸಮಗ್ರತೆಗೆ ಹೋರಾಡಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಈ ದೇಶದ ಶಕ್ತಿಯಾಗಿದ್ದಾರೆ ಎಂದರು.
ರೋಣ ಮತಕ್ಷೇತ್ರದ ಎಸ್‌ಸಿ ಘಟಕದ ಅಧ್ಯಕ್ಷ ಅರ್ಜುನ ಕೊಪ್ಪಳ ಮಾತನಾಡಿ, ವಾಜಪೇಯಿಯವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇಶದ ಪ್ರತಿಯೊಂದು ಗ್ರಾಮಗಳು ಸೇರಿದಂತೆ ಮುಖ್ಯ ಪಟ್ಟಣಗಳಿಗೂ ಉತ್ತಮ ರಸ್ತೆ ಸಂಪರ್ಕವನ್ನು ಕಲ್ಪಿಸುವ ಮೂಲಕ ವಿಶಿಷ್ಟ ಕಾರ್ಯಕ್ರಮವನ್ನು ಜಾರಿಗೆ ತಂದರು. ಜತೆಗೆ ದೇಶದ ಪ್ರಗತಿಗೆ ಹಲವಾರು ಯೋಜನೆಗಳನ್ನು ರೂಪಿಸುತ್ತ ಈಡಿ ವಿಶ್ವವೇ ಬೆಚ್ಚಿಬೀಳುವ ಹಾಗೆ ದೇಶದ ಭದ್ರತೆಯನ್ನು ಕಾಪಾಡಿದ್ದಾರೆ ಎಂದರು.
ಪುರಸಭೆ ಸದಸ್ಯ ಬಸನಗೌಡ ಪಾಟೀಲ, ಗುರುರಾಜ ಕುಲಕರ್ಣಿ, ಶಬ್ಬಿರ ಅಹ್ಮದ್ ಖಾಜಿ, ಬಸವರಾಜ ಹಕಾರಿ, ಶಿವಾನಂದ ಜಿಡ್ಡಿಬಾಗಿಲ, ಬಸವರಾಜ ರಂಗನಗೌಡ್ರ, ಶರಣಪ್ಪ ಕಂಬಳಿ, ಮಲ್ಲು ಮಾದರ, ವೀರಣ್ಣ ನವಲಗುಂದ, ಶ್ರೀಧರ ಧಲಭಂಜನ, ಬಸವರಾಜ ಕೊಟಗಿ, ಬಸವರಾಜ ಬಸನಗೌಡರ, ಕಳಕಪ್ಪ ಸಂತೋಜಿ, ಅಂದಾನಗೌಡ ರಾಯನಗೌಡ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement